ದೀಪಾವಳಿ ಹಬ್ಬಕ್ಕೆ ಏರಟೆಲ್ನಿಂದ ಉಚಿತ 2ಜಿಬಿ 4ಜಿ ಇಂಟರ್ನೆಟ್

ಗುರುವಾರ, 27 ಅಕ್ಟೋಬರ್ 2016 (15:04 IST)

ಬೆಂಗಳೂರು: ದಿನ ಬೆಳಗಾಗುವುದರೊಳಗೆ ದೀಪಾವಳಿ ಹಬ್ಬ ಎದುರಾಗುತ್ತದೆ. ಈ ಬೆಳಕಿನ ಹಬ್ಬವನ್ನು ಇನ್ನಷ್ಟು ರಂಗಾಗಿಸಲು ಏರಟೆಲ್ ಉಚಿತ 2ಜಿಬಿ 4ಜಿ ಇಂಟರ್ನೆಟ್ ಅನ್ನು ತನ್ನ ಬಳಕೆದಾರರಿಗೆ ನೀಡುತ್ತಿದ್ದು, ಏರಟೆಲ್ 4ಜಿ ಸಿಮ್ ಅನ್ನು ಅಪ್-ಗ್ರೇಡ್ ಮಾಡಿಕೊಳ್ಳುವವರು ಈ ಸೇವೆ ಪಡೆದುಕೊಳ್ಳಬಹುದು.
 


 

ಸರಿ, ಈಗ ಏರಟೆಲ್ ದೀಪಾವಳಿ ಆಫರ್ ಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಜನಸಾಮಾನ್ಯರ ಗಮನ ಸೆಳೆಯುವ ನಿಟ್ಟಿನಲ್ಲಿ 2ಜಿಬಿ 4ಜಿ ಇಂಟರ್ನೆಟ್ ಅನ್ನು ಬಳಕೆದಾರರಿಗೆ ಪರಿಚಯಿಸಿದೆ. ನಿಮ್ಮಲ್ಲಿರುವ ಪ್ರಸ್ತುತ ಸಿಮ್ ಅನ್ನು ಏರಟೆಲ್ 4ಜಿ ಗೆ ಅಪ್-ಗ್ರೇಡ್ ಮಾಡಲು ಮೊದಲು www.airtel.in/4g/sim-swap ಅಂತರ್ಜಾಲಕ್ಕೆ ಭೆಟ್ಟಿ ನೀಡಬೇಕು. ಅಲ್ಲಿ ನಿಮ್ಮ ಹೆಸರನ್ನು ನಮೂದಿಸಿ, ಏರಟೆಲ್ ಸಂಖ್ಯೆ ಹಾಕಬೇಕು. ನಂತರ ಇಮೇಲ್ ಐಡಿ, ಶಿಪ್ಪಿಂಗ್ ವಿಳಾಸವನ್ನು ಬರೆಯಬೇಕು. ಇವೆಲ್ಲ ಪ್ರಕ್ರಿಯೆ ಮುಗಿದ ನಂತರ ಓಕೆ ಬಟನ್ ಒತ್ತಿರಿ. ಆಗ `ಸೆಂಡ್ ಮಿ ಎ 4ಜಿ ಸಿಮ್' ಎಂದು ಹೇಳುತ್ತದೆ.

 

ನೀವು ಏರಟೆಲ್ 4ಜಿ ಸಿಮ್ ಕಾರ್ಡ್ ಅನ್ನು ಪಡೆದ ನಂತರ 20 ಅಂಕೆಯುಳ್ಳ ಸಿಮ್ ಸಂಖ್ಯೆಯೊಂದಿಗೆ ಎಸ್.ಎಂ.ಎಸ್. ಅನ್ನು ಕಳುಹಿಸಬೇಕು. ಈ ಸಂಖ್ಯೆ 2ಜಿ ಅಥವಾ 3ಜಿ ಸಿಮ್ ನ ಹಿಂಭಾಗದಲ್ಲಿ ಮುದ್ರಿತವಾಗಿರುತ್ತದೆ. ಸಂದೇಶ ಕಳುಹಿಸಿದ ನಂತರ, ಏರಟೆಲ್ ನಿಂದೊಂದು ಎಸ್.ಎಂ.ಎಸ್. ಬರುತ್ತದೆ. ಇದು ಏರಟೆಲ್ ನಿಂದ ಬರುವ ವಿಜ್ಞಾಪನೆಯಾಗಿದ್ದು, ದೃಢೀಕರಿಸಲು ನೀವು '1' ಅನ್ನು ಒತ್ತಬೇಕು. ಆಗ ಹಳೆ ಸಿಮ್ ಕಾರ್ಡ್ ರದ್ದಾಗುತ್ತದೆ. ಕೆಲವೇ ಕೆಲವೇ ನಿಮೀಷಗಳಲ್ಲಿ ಹಳೆಯ ಏರಟೆಲ್ ಸಿಮ್ ಡಿಸ್ಕನೆಕ್ಟ್ ಆಗುತ್ತದೆ. ಆಗ ನೀವು ಹೊಸ 4ಜಿ ಏರಟೆಲ್ ಸಿಮ್ ಕಾರ್ಡ್ ಅಳವಡಿಸಬೇಕು. ಇದಕ್ಕಾಗಿ 4ಜಿ ಸ್ಮಾರ್ಟ್ ಫೋನ್ ಅನ್ನು ಹೊಂದಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಸಿಮ್ ಅಪ್-ಗ್ರೇಡ್ ಆದ ನಂತರ ನೀವು ಉಚಿತ 2ಜಿಬಿ 4ಜಿ ಡೇಟಾವನ್ನು ಪಡೆದುಕೊಳ್ಳುತ್ತೀರಿ. 4ಜಿ ಗೆ ಅಪ್-ಗ್ರೇಡ್ ಆಗುವವರಿಗೆ ಮಾತ್ರ ಈ ಸೌಲಭ್ಯ ನೀಡಲಾಗಿದೆ.

 

ದೀಪಾವಳಿ ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುವಿಗೂ ಆಫರ್. ಸ್ಮಾರ್ಟ್ ಫೋನ್, ಲ್ಯಾಪಟಾಪ್ ಹೀಗೆ ವಿವಿಧ ಉಪಕರಣಗಳ ಮೇಲೆ ಕಡಿತ ಪಡೆಯಬಹುದು. ತಾವೇನು ಕಡಿತ ನೀಡಲು ಹಿಂದೆ ಬಿದ್ದಿಲ್ಲ ಎಂದು ಟೆಲಿಕಾಂ ಸಂಸ್ಥೆಗಳು ಸಹ, ಪೈಪೋಟಿಗೆ ಬಿದ್ದವರಂತಾಗಿ ಆಫರ್ ಗಳನ್ನು ನೀಡುತ್ತಿವೆ. ಇವೆಲ್ಲ ಜಿಯೋ ಇಫೆಕ್ಟ್ ಆಫರ್ ಎಂದು ಹೇಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ