ಫೇಸ್ಬುಕ್`ನಲ್ಲಿ ಹಾಕುವ ನಿಮ್ಮ ಫೋಟೋ ನಿಮ್ಮ ಆದಾಯದ ಗುಟ್ಟು ರಟ್ಟು ಮಾಡುತ್ತೆ..!

ಸೋಮವಾರ, 31 ಜುಲೈ 2017 (10:55 IST)
ಈಗೇನಿದ್ದರೂ ಸಾಮಾಜಿಕ ಜಾಲತಾಣಗಳ ಜಮಾನ. ಎಲ್ಲೇ ಪ್ರವಾಸಕ್ಕೆ ಹೋದರೂ.. ಏನನ್ನಾದರೂ ಖರೀದಿಸಿದರೂ ಸರಿ ಜೀವನದ ಪ್ರತಿಯೊಂದು ಸಂದರ್ಭವನ್ನ, ಸಂಭ್ರಮವನ್ನ ಫೇಸ್ಬುಕ್, ಇನ್`ಸ್ಟಾಗ್ರಾಮ್`ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರ ಹಂಚಿಕೊಳ್ಳುವುದು ಕಾಮನ್ ಆಗಿದೆ. ಆದರೆ, ಈ ಪೋಸ್ಟ್`ಗಳೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನ ನಿಮ್ಮ ಮನೆ ಬಾಗಿಲಿಗೆ ತಂದು ನಿಲ್ಲಿಸಬಹುದು.

 ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆರಿಗೆ ಗಳ್ಳರ ಹೆಡೆಮುರಿ ಕಟ್ಟಲು ಹೊಸ ಹೊಸ ಉಪಾಯಗಳನ್ನ ಹುಡುಕುತ್ತಿದ್ದು, ಅದರ ಭಾಗವಾಗಿ ತೆರಿಗೆ ಕುರಿತ ಮಾಹಿತಿ ಸಂಗ್ರಹದ ಸಂದರ್ಭ ಬ್ಯಾಂಕ್ ದಾಖಲೆಪತ್ರಗಳನ್ನಷ್ಟೇ ಪರಿಗಣಿಸದೇ ಲಕ್ಷಾಂತರ ರೂ. ಖರ್ಚು ಮಾಡಿ ಮೋಜು, ಮಸ್ತಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಟೊ, ವಿಡಿಯೋಗಳ ಮೇಲೂ ಕಣ್ಣಿಡಲು ನಿರ್ಧರಿಸಿದೆ. ವ್ಯಕ್ತಿ ಘೋಷಿಸಿರುವ ಆದಾಯದ ಮಾಹಿತಿ ಮತ್ತು ಆತ ಖರ್ಚು ಮಾಡಿರುವ ಹಣದ ಮಾಹಿತಿಗಳನ್ನ ತುಲನೆ ಮಾಡಿ ಅಘೊಷಿತ ಆದಾಯ ಇರಬಹುದೇ ಎಂಬ ಬಗ್ಗೆ ಪತ್ತೆಹಚ್ಚಲಾಗುತ್ತೆ.

ಮುಂದಿನ ತಿಂಗಳಿಂದ ಕೇಂದ್ರ ಸರ್ಕಾರ ಇಂಥದ್ದೊಂದು ಯೋಜನೆ ಜಾರಿಗೆ ಮುಂದಾಗಿದ್ದು, ಯಾವುದೇ ಮನೆ, ಕಚೇರಿಗಳ ಮೇಲೆ ದಾಳಿ ನಡೆಸದೇ ತಂತ್ರಜ್ಞಾನವನ್ನ ಬಳಸಿಕೊಂಡು ತೆರಿಗೆಗಳ್ಳರನ್ನ ಪತ್ತೆ ಮಾಡಲಾಗುತ್ತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ