ಇಂಧೋರ್: ಮೇಘಾಲಯದಲ್ಲಿ ಹನಿಮೂನ್ ಗೆ ಹೋಗಿದ್ದಾಗ ಗಂಡ ರಾಜ ರಘುವಂಶಿಯನ್ನು ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಸೋನಂ ರಘುವಂಶಿ ಜೈಲಿನಲ್ಲಿ ಏನು ಮಾಡ್ತಿದ್ದಾಳೆ?
ಸೋನಂ ಬಂಧನವಾಗಿ ಒಂದು ತಿಂಗಳಾಗಿವೆ. ಸೋನಂ ರಘುವಂಶಿ, ಆಕೆಯ ಪ್ರಿಯಕರ ರಾಜ್ ಖುಶ್ವಾಹ ಸೇರಿದಂತೆ ನಾಲ್ವರು ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಎಲ್ಲಾ ಆರೋಪಿಗಳೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶಿಲ್ಲೋಂಗ್ ಜೈಲ್ ನಲ್ಲಿರುವ ಸೋನಂ ಏನು ಮಾಡ್ತಿದ್ದಾಳೆ ಎನ್ನುವುದು ಈಗ ಬಹಿರಂಗವಾಗಿದೆ.
ಸೋನಂ ಇದೀಗ ಶಿಲ್ಲೋಂಗ್ ಜೈಲ್ ನಲ್ಲಿ ವಿಚಾರಾಧೀನ ಕೈದಿಯಾಗಿದ್ದಾರೆ. ಜೈಲ್ ವಾರ್ಡ್ ರೂಂನ ಪಕ್ಕದಲ್ಲೇ ಇಬ್ಬರು ಮಹಿಳಾ ಕೈದಿಗಳ ಜೊತೆ ಇದ್ದಾರೆ. ಜೈಲ್ ನಲ್ಲಿ ತನ್ನ ಕೃತ್ಯದ ಬಗ್ಗೆ ಆಕೆ ಯಾರೊಂದಿಗೂ ಬಾಯ್ಬಿಟ್ಟಿಲ್ಲ. ಆದರೆ ತನ್ನ ಸಹಕೈದಿಗಳೊಂದಿಗೆ ಹೊಂದಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ವಿಶೇಷವೆಂದರೆ ಇದುವರೆಗೆ ಸೋನಂ ಜೈಲಿನಲ್ಲಿ ತನ್ನ ಮನೆಯವರನ್ನು ಯಾರನ್ನೂ ಭೇಟಿ ಮಾಡಿಲ್ಲ. ಭೇಟಿ ಮಾಡುವ ಆಸಕ್ತಿಯೂ ಆಕೆಗಿಲ್ಲವಂತೆ. ಇನ್ನೂ ಗಮನಿಸಬೇಕಾದ ಅಂಶವೆಂದರೆ ತನ್ನ ಗಂಡನನ್ನೇ ಕೊಲೆ ಮಾಡಿರುವ ಯಾವ ಪಶ್ಚಾತ್ತಾಪವೂ ಅಕೆಗಿಲ್ಲ ಎನ್ನಲಾಗಿದೆ.
ಇನ್ನೊಂದೆಡೆ ಸೋನಂ ತವರು ಮನೆಯವರು ರಾಜ ರಘುವಂಶಿ ಮನೆಯವರಿಗೆ ಹೊರಗಿನಿಂದ ಬೆಂಬಲಿಸುವುದಾಗಿ ಹೇಳಿದರೂ ಒಳಗೊಳಗೇ ಸೋನಂಗೆ ಬೆಂಬಲ ನೀಡುತ್ತಿದ್ದಾರೆ. ಆಕೆಯ ಜೊತೆ ರಹಸ್ಯವಾಗಿ ಸಂಪರ್ಕ ಹೊಂದಿದ್ದಾರೆ ಎಂದು ರಾಜ ರಘುವಂಶಿ ಮನೆಯವರು ಆರೋಪಿಸುತ್ತಿದ್ದಾರೆ. ಸೋನಂ ಜೊತೆ ಫೋನ್ ನಲ್ಲೇ ಮಾತುಕತೆ ನಡೆಸುತ್ತಿದ್ದಾರೆ, ಆಕೆಗೆ ಜಾಮೀನು ಕೊಡಿಸಲು ಲಾಯರ್ ಮೂಲಕ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸದ್ದಾರೆ.