ದರ್ಶನ್ ಪರ ಲಾಯರ್ ಕಪಿಲ್ ಸಿಬಲ್ ಬೇಕೆಂದೇ ಕೋರ್ಟ್ ಗೆ ಗೈರಾದರಾ

Krishnaveni K

ಮಂಗಳವಾರ, 22 ಜುಲೈ 2025 (15:25 IST)
ನವದೆಹಲಿ: ಎಲ್ಲಾ ಸರಿ ಹೋಗಿದ್ದರೆ ಇಂದು ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಆಂಡ್ ಗ್ಯಾಂಗ್ ಗೆ ನೀಡಲಾಗಿದ್ದ ಜಾಮೀನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ತೀರ್ಪು ಬರಬೇಕಿತ್ತು. ಆದರೆ ದರ್ಶನ್ ಪರ ವಕೀಲ ಕಪಿಲ್ ಸಿಬಲ್ ಬೇಕೆಂದೇ ಗೈರಾದರಾ ಎಂಬ ಅನುಮಾನ ಶುರುವಾಗಿದೆ.

ನಟ ದರ್ಶನ್ ಡೆವಿಲ್ ಸಿನಿಮಾ ಕೆಲಸದಲ್ಲಿ ಥೈಲ್ಯಾಂಡ್ ನಲ್ಲಿದ್ದಾರೆ. ಇತ್ತ ಸುಪ್ರೀಂಕೋರ್ಟ್ ನಲ್ಲಿ ಅವರ ವಿರುದ್ಧವಾಗಿ ತೀರ್ಪು ಬರುವ ಸಾಧ್ಯತೆಯಿತ್ತು. ಒಂದು ವೇಳೆ ಸುಪ್ರೀಂಕೋರ್ಟ್ ಬೇಲ್ ರದ್ದುಪಡಿಸಿದರೆ ದರ್ಶನ್ ಆಂಡ್ ಗ್ಯಾಂಗ್ ಮತ್ತೆ ಜೈಲು ಸೇರಬೇಕಾಗುತ್ತದೆ.

ಇಂದು ಸುಪ್ರೀಂಕೋರ್ಟ್ ನಲ್ಲಿ ದರ್ಶನ್ ಮತ್ತು ಇತರೆ ಆರೋಪಿಗಳ ಪರ ವಕೀಲರು ವಾದ ಮಂಡಿಸಬೇಕಿತ್ತು. ಆದರೆ ಇತರೆ ಆರೋಪಿಗಳ ವಕೀಲರು ಮಾತ್ರ ಹಾಜರಿದ್ದರು. ದರ್ಶನ್ ಪರ ವಕೀಲರಾಗಿದ್ದ ಖ್ಯಾತ ಅಡ್ವೋಕೇಟ್ ಕಪಿಲ್ ಸಿಬಲ್ ಗೈರಾಗಿದ್ದರು. ಬೇರೆ ಪ್ರಕರಣದ ವಿಚಾರಣೆ ನೆಪವೊಡ್ಡಿ ಅವರು ಇಂದು ಗೈರಾಗಿದ್ದಾರೆ.

ಆದರೆ ಇದರ ಹಿಂದೆ ಬೇರೆಯೇ ಲೆಕ್ಕಾಚಾರವಿದೆ ಎನ್ನಲಾಗುತ್ತಿದೆ. ತೀರ್ಪು ಮುಂದೂಡುವ ಉದ್ದೇಶದಿಂದಲೇ ಕಪಿಲ್ ಸಿಬಲ್ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ದರ್ಶನ್ ಗೂ ಕಾಲಾವಕಾಶ ಸಿಕ್ಕಂತಾಗುತ್ತದೆ. ಇದೇ ಕಾರಣಕ್ಕೆ ಕಪಿಲ್ ಗೈರಾಗಿದ್ದರಾ ಎಂಬ ಅನುಮಾನ ಈಗ ಎಲ್ಲರಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ