ಫೇಸ್‌ಬುಕ್ ಇಂಡಿಯಾ ನಿರ್ದೇಶಕರಾಗಿ ಪುಲ್ಕಿತ್!

ಮಂಗಳವಾರ, 13 ಡಿಸೆಂಬರ್ 2016 (11:49 IST)
ಆನ್‌ಲೈನ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಇಂಡಿಯಾಗೆ ಹೊಸ ನಿರ್ದೆಶಕರಾಗಿ ಪಲ್ಕಿತ್ ತ್ರಿವೇದಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಫೇಸ್‍ಬುಕ್ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದಲ್ಲಿ ಮುಖ್ಯವಾಗಿ ಇ-ಕಾಮರ್ಸ್, ರೀಟೇಲ್, ಟ್ರಾವೆಲ್, ಹಣಕಾಸು ಸೇವೆಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ಪುಲ್ಕಿತ್ ನಿಭಾಯಿಸಲಿದ್ದಾರೆ.
 
’ಭಾರತದಲ್ಲಿ ಫೇಸ್‌ಬುಕ್ ಖಾತೆಗಳ ನಿರ್ಮಾಣ, ನಿರ್ವಹಣೆ, ಯೋಜನಾ ಸಹಯೋಗ ಮುಂತಾದ ವ್ಯವಹಾರಗಳನ್ನು ಪುಲ್ಕಿತ್ ನಿರ್ವಹಿಸಲಿದ್ದಾರೆ’ ಎಂದು ಫೇಸ್‍ಬುಕ್ ಹೇಳಿದೆ. 
 
ಖರೀದಿ, ವ್ಯಾಪಾರವೃದ್ಧಿ, ಸಹಯೋಗಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಪಲ್ಕಿತ್‌ಗೆ 18 ವರ್ಷಗಳ ಸುದೀರ್ಘ ಅನುಭವ ಇದೆ. ಅಂತಾರಾಷ್ಟ್ರೀಯ ಕಂಪನಿಗಳಾದ ಗೂಗಲ್, ಇಂಟೆಲ್, ಮೈಕ್ರೋಸಾಫ್ಟ್, ಐಬಿಎಂ, ಎಚ್‍ಸಿಎಲ್ ಕಂಪನಿಗಳೊಂದಿಗೆ ಅವರಿಗೆ ಒಳ್ಳೆಯ ಸಂಬಂಧಗಳಿವೆ. 
 
’ಪ್ರತಿಭಾವಂತರಾದ ಪುಲಕಿತ್ ಅವರು ಫೇಸ್‍ಬುಕ್‌ನಲ್ಲಿ ಸೇರಿರುವುದು ಸಂತಸ ತಂದಿದೆ. ಮುಖ್ಯವಾಗಿ ವಾಣಿಜ್ಯ ಪ್ರಕಟಣೆಗಳ ಅಭಿವೃದ್ಧಿಗೆ ಅವರ ಆಯ್ಕೆ ಖಂಡಿತ ಉಪಯೋಗವಾಗುತ್ತದೆ. ವೃತ್ತಿಪರವಾಗಿ ನಮ್ಮ ಬಳಗಕ್ಕೆ ಇನ್ನಷ್ಟು ಬಲ ಬಂದಂತಾಗಿದೆ’ ಎಂದು ಫೇಸ್‌ಬುಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಉಮಾಂಗ್ ಬೇಡಿ ಹೇಳಿದ್ದಾರೆ.  
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ