ಭಾರತದ ಅತಿದೊಡ್ದ ಆನ್‌ಲೈನ್ ರೀಟೇಲ್ ಕಂಪೆನಿ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಸಿಂಹಪಾಲನ್ನು ಹೊಂದಿದೆ. 2016ರ ಹಬ್ಬದ ತ್ರೈಮಾಸಿಕದಲ್ಲಿ ಅತ್ಯಂತ ಮುಖ್ಯವಾದ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಅತಿಹೆಚ್ಚು ಪಾಲನ್ನು ದಾಖಲಿಸಿದೆ.
ಇನ್ನೊಂದು ಇ-ಕಾಮರ್ಸ್ ದೈತ್ಯ ಅಮೆಜಾನ್ ಸಹ ಗಮನಾರ್ಹ ಸಾಧನೆ ಮಾಡಿದೆ. 2016ರ ಅಕ್ಟೋಬರ್-ಡಿಸೆಂಬರ್ ನಡುವೆ ಆನ್‌ಲೈನ್ ವೇದಿಕೆಯಾಗಿ ನಡೆದ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಫ್ಲಿಪ್‍ಕಾರ್ಟ್ ಮಾತ್ರ ಶೇ.51ರಷ್ಟು ಮಾರುಕಟ್ಟೆ ಪಾಲನ್ನು ಕೈವಶಮಾಡಿಕೊಂಡಿದೆ.
ಅಮೆಜಾನ್ ಶೇ.33 ಪಾಲನ್ನು ಹೊಂದಿರುವುದಾಗಿ ಹಾಂಕಾಂಗ್‌ನ ಕೌಂಟರ್‌ಪಾಯಿಂಟ್ ಟೆಕ್ನಾಲಜಿ ಮಾರುಕಟ್ಟೆ ಸಂಶೋಧನೆ ತಿಳಿಸಿದೆ. ಆನ್‌ಲೈನ್ ಬಳಕೆದಾರರನ್ನು ಆಕರ್ಷಿಸುವಲ್ಲಿ ಇ-ಕಾಮರ್ಸ್ ಸಂಸ್ಥೆ ಸ್ನಾಪ್‍ಡೀಲ್ ಸೋತಿದೆ. ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಕಂಪೆನಿ ಶೇ.13ಕ್ಕೆ ಕುಸಿದಿದೆ ಎಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.