ಕ್ಯಾಲ್ಶಿಯಂ ಟ್ಯಾಬ್ಲೆಟ್ ಅತಿಯಾಗಿ ಸೇವಿಸುತ್ತಿದ್ದರೆ ಡಾ ಬಿಎಂ ಹೆಗ್ಡೆಯವರ ಸಲಹೆ ಕೇಳಿ

Krishnaveni K

ಗುರುವಾರ, 7 ಆಗಸ್ಟ್ 2025 (10:28 IST)
Photo Credit: Instagram
ಇತ್ತೀಚೆಗಿನ ದಿನಗಳಲ್ಲಿ ವಿಟಮಿನ್ ಟ್ಯಾಬ್ಲೆಟ್ ತಿನ್ನುವುದು ಎಲ್ಲರಿಗೂ ಅಭ್ಯಾಸವಾಗಿ ಬಿಟ್ಟಿದೆ. ಆದರೆ ಕ್ಯಾಲ್ಶಿಯಂ ಟ್ಯಾಬ್ಲೆಟ್ ಅತಿಯಾಗಿ ಸೇವನೆ ಮಾಡುತ್ತಿದ್ದರೆ ಖ್ಯಾತ ವೈದ್ಯ ಡಾ ಬಿಎಂ ಹೆಗ್ಡೆಯವರ ಈ ಒಂದು ಸಲಹೆಯನ್ನು ತಪ್ಪದೇ ಗಮನಿಸಿ.

ವಿಶೇಷವಾಗಿ ಮಹಿಳೆಯರಲ್ಲಿ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಕೊರತೆ ಕಂಡುಬರುತ್ತಿದೆ. ಇದರಿಂದಾಗಿ ಮೈ ಕೈ ನೋವು, ದುರ್ಬಲ ಮೂಳೆ, ಮಾಂಸಖಂಡಗಳ ಸೆಳೆತ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ವೈದ್ಯರಲ್ಲಿಗೆ ಹೋದರೆ ತಕ್ಷಣವೇ ಅವರು ನಿಮಗೆ ಕ್ಯಾಲ್ಶಿಯಂ ಟ್ಯಾಬ್ಲೆಟ್ ಅಥವಾ ವಿಟಮಿನ್ ಡಿ ಸಪ್ಲಿಮೆಂಟ್ ಕೊಡುತ್ತಾರೆ.

ಆದರೆ ಕ್ಯಾಲ್ಶಿಯಂ ಅಂಶ ಕಡಿಮೆಯಾಗಿದೆಯೆಂದು ಪ್ರತಿನಿತ್ಯ ಈ ಟ್ಯಾಬ್ಲೆಟ್ ಸೇವನೆ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ? ಸಂವಾದ ಕಾರ್ಯಕ್ರಮವೊಂದರಲ್ಲಿ ಈ ಹಿಂದೆ ಡಾ ಬಿಎಂ ಹೆಗ್ಡೆಯವರು ಇದರ ಬಗ್ಗೆ ನೀಡಿರುವ ಎಚ್ಚರಿಕೆ ನೀವು ಗಮನಿಸಲೇಬೇಕು.

ಕ್ಯಾಲ್ಶಿಯಂ ಗುಳಿಗೆಗಳನ್ನು ಅತಿಯಾಗಿ ಸೇವನೆ ಮಾಡುವುದು ಅಪಾಯಕಾರಿ. ಕ್ಯಾಲ್ಶಿಯಂ ಅಂಶ ಕಿಡ್ನಿಗೆ ಹಾನಿ ಮಾಡಬಹುದು. ಹೃದಯದ ಆರ್ಟರಿಗಳಿಗೆ ತೊಂದರೆ ಮಾಡಬಹುದು. ಇದರಿಂದಾಗಿ ಹೃದಯಾಘಾತದಂತಹ ಸಮಸ್ಯೆ ಬರಬಹುದು. ಹೀಗಾಗಿ ಕ್ಯಾಲ್ಶಿಯಂ, ವಿಟಮಿನ್ ಡಿ ಅಂಶ ಬೇಕೆಂದರೆ ನೈಸರ್ಗಿಕವಾಗಿ ಅದನ್ನು ಪಡೆಯಲು ಪ್ರಯತ್ನಿಸಿ. ಬದಲಾಗಿ ಗುಳಿಗೆಗಳಿಂದ ಅಲ್ಲ ಎಂದು ಅವರು ಹಿಂದೊಮ್ಮೆ ಸಲಹೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ