ಎಸಿ ರೈಲ್ವೆ ಟಿಕೆಟ್‌ನಲ್ಲಿ ಶೇ.75 ರಷ್ಟು ರಿಯಾಯಿತಿ ಪಡೆಯಬಹುದು ನಿಮಗೆ ಗೊತ್ತೆ?

ಶುಕ್ರವಾರ, 22 ಜುಲೈ 2016 (20:07 IST)
ಭಾರತೀಯ ರೈಲ್ವೆ ಇಲಾಖೆ ವಿವಿಧ ರೀತಿಯ ರಿಯಾಯಿತಿಗಳನ್ನು ಪ್ರಯಾಣಿಕರಿಗೆ ನೀಡುತ್ತದೆ ಎನ್ನುವುದು ನಿಮಗೆ ಗೊತ್ತಿದೆಯೇ? ರೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಸಂದರ್ಶನಕ್ಕೆ ಹೋಗುವವರಿಗೆ, ಹಿರಿಯ ನಾಗರಿಕರಿಗೆ ಸೇರಿದಂತೆ ಹಲವರಿಗೆ ಹಲವು ರೀತಿಯ ರಿಯಾಯಿತಿ ನೀಡುತ್ತದೆ.
 
ಕ್ಯಾನ್ಸರ್ ರೋಗಿಗಳಿಗಾಗಿ
 
ರೋಗಿಗಳಿಗಾಗಿ ಪ್ರಥಮ ದರ್ಜೆ, ದ್ವಿತಿಯ ದರ್ಜೆ ಮತ್ತು ಎಸಿ ಚೇರ್ ಕಾರ್ 
 
3ಎಸಿ ಮತ್ತು ಸ್ಲೀಪರ್ ಕ್ಲಾಸ್‌ಗಳಲ್ಲಿ ಶೇ.100 ರಷ್ಟು ರಿಯಾಯಿತಿ
 
1ಎಸಿ ಮತ್ತು 2ಎಸಿಯಲ್ಲಿ ಶೇ.50 ರಷ್ಟು ರಿಯಾಯಿತಿ
 
ರೋಗಿಗಳೊಂದಿಗೆ ಪ್ರಯಾಣಿಸುವವರು ಕೂಡಾ ರಿಯಾಯಿತಿ ಪಡೆಯಬಹುದಾಗಿದೆ.
 
ಹೃದಯ, ಕಿಡ್ನಿ ಮತ್ತು ಥಾಲಸ್ಮಿಯಾ ರೋಗಿಗಳಿಗೆ
 
ರೋಗಿಗಳು ಡೈಯಾಲಿಸಿಸ್ ಅಥವಾ ಹೃದಯ ರೋಗಕ್ಕೆ ಚಿಕಿತ್ಸೆ ಅಥವಾ ಕಿಡ್ನಿ ಜೋಡಣೆಗಾಗಿ ತೆರಳುತ್ತಿರುವವರಿಗೆ ರಿಯಾಯಿತಿ.
 
ಫಸ್ಟ್‌ ಮತ್ತು ಸೆಕೆಂಡ್‌ ಕ್ಲಾಸ್‌ಗಳಲ್ಲಿ, 3ಎಸಿ ಮತ್ತು ಚೇರ್ ಕಾರ್‌‌ನಲ್ಲಿ ಶೇ.75 ರಷ್ಟು ರಿಯಾಯಿತಿ, ರೋಗಿಗಳೊಂದಿಗೆ ಪ್ರಯಾಣಿಸುವವರಿಗೂ ಶೇ.75 ರಷ್ಟು ರಿಯಾಯಿತಿ.
 
ಟಿಬಿ ರೋಗಿಗಳಿಗೆ
 
ಫಸ್ಟ್, ಸೆಕೆಂಡ್ ಮತ್ತು ಸ್ಲೀಪರ್ ಕ್ಲಾಸ್‌‍ಗಳಲ್ಲಿ ರೋಗಿಗಳು ಮತ್ತು ಅವರ ಅವಲಂಬಿತರಿಗೆ ಶೇ.75 ರಷ್ಟು ರಿಯಾಯಿತಿ.
 
ಏಡ್ಸ್ ರೋಗಿಗಳಿಗೆ ಮತ್ತು ಅವರ ಅವಲಂಬಿತರಿಗೆ ಚಿಕಿತ್ಸೆಗಾಗಿ ಸೆಕೆಂಡ್‌ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿರುವಾಗ ಶೇ.50 ರಷ್ಟು ರಿಯಾಯಿತಿ ಪಡೆಯಬಹುದು. 
 
ಹಿರಿಯ ನಾಗರಿಕರು
 
60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಎಲ್ಲಾ ಕ್ಲಾಸ್‌ಗಳಲ್ಲಿ ಶೇ.40 ರಷ್ಟು ರಿಯಾಯಿತಿ ಪಡೆಯಬಹುದು.
 
58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಎಲ್ಲಾ ಕ್ಲಾಸ್‌ಗಳಲ್ಲಿ ಶೇ.50 ರಷ್ಟು ರಿಯಾಯಿತಿ ಪಡೆಯಬಹುದು.ರಾಜಧಾನಿ, ಶತಾಬ್ದಿ, ಜನಶತಾಬ್ದಿ ಮತ್ತು ಡುರೊಂಟೋ ರೈಲುಗಳಲ್ಲಿಯೂ ರಿಯಾಯಿತಿ ಪಡೆಯಬಹುದಾಗಿದೆ.
 
ಯುದ್ಧಪೀಡಿತ ವಿಧುವೆಯರು
 
ಸೇನೆಯಲ್ಲಿ ಕಾರ್ಯನಿರ್ವಹಿಸುವಾಗ ಹುತಾತ್ಮರಾದ ಕುಟುಂಬದವರು ಸೆಕೆಂಡ್ ಕ್ಲಾಸ್ ಮತ್ತು ಸ್ಲೀಪರ್ ಕ್ಲಾಸ್‌ಗಳಲ್ಲಿ ಶೇ.75 ರಷ್ಟು ರಿಯಾಯಿತಿ ಪಡೆಯಬಹುದು.
 
ವಿದ್ಯಾರ್ಥಿಗಳಿಗೆ:ಶೈಕ್ಷಣಿಕ ಪ್ರವಾಸ ಸಂದರ್ಭದಲ್ಲಿ ರಿಯಾಯಿತಿ ಪಡೆಯಬಹುದಾಗಿದೆ.
 
ಸಾಮಾನ್ಯ ಕೆಟಗೆರಿ
 
ಸೆಕೆಂಡ್ ಮತ್ತು ಸ್ಲೀಪರ್ ಕ್ಲಾಸ್‌ಗಳಲ್ಲಿ ಶೇ.50 ರಷ್ಟು ರಿಯಾಯಿತಿ
 
ಮಾಸಿಕ ಮತ್ತು ತ್ರೈಮಾಸಿಕ ಸೀಜನ್ ಟಿಕೆಟ್‌ನಲ್ಲಿ ಶೇ.50 ರಷ್ಟು ರಿಯಾಯಿತಿ ಪಡೆಯಬಹುದು
 
ಎಸ್‌ಸಿ ಮತ್ತು ಎಸ್‌ಟಿ ಕೆಟಗೆರಿ
 
ಸೆಕೆಂಡ್ ಮತ್ತು ಸ್ಲೀಪರ್ ಕ್ಲಾಸ್‌ಗಳಲ್ಲಿ ಶೇ.75ರಷ್ಟು ರಿಯಾಯಿತಿ
 
ಮಾಸಿಕ ಮತ್ತು ತ್ರೈಮಾಸಿಕ ಸೀಜನ್ ಟಿಕೆಟ್‌ನಲ್ಲಿ ಶೇ.75 ರಷ್ಟು ರಿಯಾಯಿತಿ ಪಡೆಯಬಹುದು
 
ವಿದ್ಯಾರ್ಥಿನಿಯರು ಪದವಿಯವರಿಗೆ ಮತ್ತು ವಿದ್ಯಾರ್ಥಿಗಳು 12ನೇ ತರಗತಿಯವರೆಗೆ ಉಚಿತ ಸೆಕೆಂಡ್ ಕ್ಲಾಸ್ ಮಾಸಿಕ ಸೀಜನ್ ಟಿಕೆಟ್ ಪಡೆಯಬಹುದು.
 
ಯುಪಿಎಸ್‌ಸಿ ಮತ್ತು ಎಸ್‌ಎಸ್‌ಸಿ ಪರೀಕ್ಷೆಗಳಿಗೆ ತೆರಳುತ್ತಿರುವ ಸಂದರ್ಭದಲ್ಲಿ ಸೆಕೆಂಡ್ ಕ್ಲಾಸ್‌ನಲ್ಲಿ ಶೇ.50 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
 
ವಿದೇಶಿ ವಿದ್ಯಾರ್ಥಿಗಳು ಸರಕಾರ ಆಯೋಜಿಸಿದ ಕ್ಯಾಂಪ್, ಸೆಮಿನಾರ್‌ಗಳು ಅಥವಾ ಐತಿಹಾಸಿಕ ಪ್ರವಾಸಗಳಿಗೆ ಸೆಕೆಂಡ್ ಕ್ಲಾಸ್ ಮತ್ತು ಸ್ಲೀಪರ್ ಕ್ಲಾಸ್‌ನಲ್ಲಿ ಶೇ.50 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. 
 
ವೈದ್ಯರಿಗೆ
 
ವೈದ್ಯರು ರಾಜಧಾನಿ, ಶತಾಬ್ದಿ ಮತ್ತು ಜನಶತಾಬ್ದಿ ರೈಲುಗಳು ಸೇರಿದಂತೆ ಎಲ್ಲಾ ರೈಲುಗಳಲ್ಲಿ ಶೇ.10 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ