Mock Drill: ಬೆಂಗಳೂರು ಪೂರ್ತಿ ಲೈಟ್ಸ್ ಆಫ್
ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ರಾಜಾಜಿನಗರ, ಮೆಜೆಸ್ಟಿಕ್, ಗಾಂಧಿನಗರ, ಕಾರ್ಪೋರೇಷನ್ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಪ್ರದೇಶದಲ್ಲಿ ಮನೆ, ಕಚೇರಿ, ಬೀದಿ ದೀಪ ಸೇರಿದಂತೆ ಲೈಟ್ಸ್ ಆಫ್ ಮಾಡಿ ಮಾಕ್ ಡ್ರಿಲ್ ನಡೆಸಲಾಗುತ್ತದೆ.
ಯುದ್ಧದ ಸಂದರ್ಭಗಳಲ್ಲಿ ಶತ್ರುಸೇನೆಗೆ ನಮ್ಮ ಸ್ಥಳ ಗುರುತಿಸಲಾಗದಂತೆ ಸಂಪೂರ್ಣ ಲೈಟ್ಸ್ ಆಫ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಹೇಗಿರಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ತಿಳಿಸಿಕೊಡಲು ಮಾಕ್ ಡ್ರಿಲ್ ಮಾಡಿಸಲಾಗುತ್ತಿದೆ.