ಕೇವಲ 1700 ರೂ,ಗಳಿಗೆ ಐಫೋನ್ 7 ಖರೀದಿಸಬಹುದು: ಹೇಗೆ ಗೊತ್ತಾ?
ಬುಧವಾರ, 14 ಸೆಪ್ಟಂಬರ್ 2016 (14:06 IST)
ಒಂದು ವೇಳೆ ಮಾಧ್ಯಮ ವರದಿಗಳನ್ನು ನೋಡಿದಲ್ಲಿ ಹಬ್ಬದ ಸೀಜನ್ ಗ್ರಾಹಕರಿಗೆ ಬಂಪರ ಕೊಡುಗೆಯಾಗಲಿದೆ ಎನ್ನುವದು ಕಂಡು ಬರುತ್ತಿದೆ.
ಸ್ಮಾರ್ಟ್ಫೋನ್ ಬಳಕೆದಾರರಲ್ಲಿ ಐಫೋನ್ ಬಳಸಬೇಕು ಎನ್ನುವ ಕ್ರೇಜ್ ಇದ್ದೇ ಇರುತ್ತದೆ. ಆದರೆ ಐಫೋನ್ 7 ದುಬಾರಿಯಾಗಿದ್ದರಿಂದ ಸ್ಮಾರ್ಟ್ಫೋನ್ ಬಳಕೆದಾರರಿಗೆ ಖರೀದಿಸುವ ಆಸೆಗೆ ತಣ್ಣೀರು ಎರಚಿದಂತಾಗುತ್ತದೆ.
ವರದಿಗಳ ಪ್ರಕಾರ, ಒಂದು ವೇಳೆ ನಿಮ್ಮ ಬಳಿ ಆಧಾರ ಕಾರ್ಡ್ ಇದ್ದಲ್ಲಿ 1700 ರೂಪಾಯಿಗಳ ಮಾಸಿಕ ಕಂತುಗಳೊಂದಿಗೆ ಐಫೋನ್ 7 ಖರೀದಿಸಬಹುದಾಗಿದೆ.
ಆಪಲ್ ಸಂಸ್ಥೆ ಸ್ಕೀಮ್ ಲಾಭ-ನಷ್ಟದ ಬಗ್ಗೆ ಭಾರತೀಯ ಬ್ಯಾಂಕ್ಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಆಪಲ್ ಆಕಾಂಕ್ಷಿಗಳು ಅಕ್ಟೋಬರ್ 7 ರಿಂದ ಲೇಟೇಸ್ಟ್ ಐಫೋನ್ 7 ಖರೀದಿಸಬಹುದಾಗಿದೆ.ಕಳೆದ ವಾರ ಸಾನ್ ಫ್ರಾನ್ಸಿಸ್ಕೋ ನಗರದಲ್ಲಿ ಆಪಲ್ ಸಂಸ್ಥೆ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಮಾಡೆಲ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ