ಜಿಯೋನಿ ನೂತನ ಪ್ರಚಾರ ರಾಯಭಾರಿ ಕೊಹ್ಲಿ

ಮಂಗಳವಾರ, 10 ಜನವರಿ 2017 (12:38 IST)
ಪ್ರಮುಖ ಮೊಬೈಲ್ ತಯಾರಿಕಾ ಕಂಪನಿ ಜಿಯೋನಿ ಇಂಡಿಯಾ ತನ್ನ ನೂತನ ಪ್ರಚಾರ ರಾಯಭಾರಿಯಾಗಿ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ನೇಮಿಸಿದೆ. ಜಿಯೋನಿಗೆ ಈಗಾಗಲೆ ಬ್ರ್ಯಾಂಡ್ ರಾಯಭಾರಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಇದ್ದಾರೆ.
 
ಆಲಿಯಾಗೆ ಜತೆಯಾಗಿ ವಿರಾಟ್ ಕಂಪನಿ ಉತ್ಪನ್ನಗಳನ್ನು ಇನ್ನಷ್ಟು ಜನಪ್ರಿಯವಾಗುವಂತೆ ಮಾಡಲಿದ್ದಾರೆ. ಜಿಯೋನಿ ಹೊಸ ಜಾಹೀರಾತುಗಳಲ್ಲಿ ಕೊಹ್ಲಿ ಕಾಣಿಸಲಿದ್ದಾರೆ ಎಂದು ಜಿಯೋನಿ ಇಂಡಿಯಾ ಸಿಇಓ ಅರವಿಂದ್ ಆರ್ ವೋಹ್ರಾ ತಿಳಿಸಿದ್ದಾರೆ.
 
ಕಳೆದ ನಾಲ್ಕು ವರ್ಷಗಳಲ್ಲಿ 1.2 ಕೋಟಿ ಫೋನ್‍ಗಳು ಮಾರಾಟವಾಗಿವೆ ಎಂದಿದ್ದಾರೆ. ರಿಟೇಲ್ ಮಾರುಕಟ್ಟೆಯನ್ನು ಅಭಿವೃದ್ಧಿ ಮಾಡುವ ಕಡೆಗೆ ದೃಷ್ಟಿ ಹರಿಸಿದ್ದೇವೆಂದೂ..2018ರ ಮಾರ್ಚ್ ಒಳಗೆ 500 ಬ್ರ್ಯಾಂಡ್ ಮಳಿಗೆಗಳನ್ನು ಆರಂಭಿಸಲಿದ್ದೇವೆ ಎಂದಿದ್ದಾರೆ. ಸದ್ಯಕ್ಕೆ 100 ಬ್ರ್ಯಾಂಡ್ ಮಳಿಗೆಗಳು ಭಾರತದಲ್ಲಿವೆ ಎಂದು ವಿವರ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ