ಎಷ್ಟೇ ಮನವಿಗಳು ಬಂದರೂ...ಎಷ್ಟೇ ಕಷ್ಟಗಳು ಬಂದರು ಜಿ-ಮೇಲ್ ಸೈಜ್ (ಅಟ್ಯಾಚ್‌ಮೆಂಟ್ ಸೇರಿ) 25 ಎಂಬಿ ಮೀರಲಿಲ್ಲ ಗೂಗಲ್. ಈಗ ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಇತರೆ ಮೇಲ್‌ಗಳಿಂದ ಬರುವ ಮೇಲ್ ಸೈಜನ್ನು ಎರಡು ಪಟ್ಟು ಮಾಡುತ್ತಿರುವುವಾಗಿ ಜಿ-ಮೇಲ್ ಪ್ರಕಟಿಸಿದೆ.
ಆ ಪ್ರಕಾರ ಈಗ ಮೇಲ್‌ನಲ್ಲಿ 50ಎಂಬಿ ಫೈಲ್ಸ್ ಸಹ ಸ್ವೀಕರಿಸಬಹುದು. ಇನ್ನು ಮುಂದೆ ಗೂಗಲ್ ನಿಂದ ದೊಡ್ಡ ಪ್ರಮಾಣದ ಫೈಲ್ಸ್ ಶೇರ್ ಮಾಡಿಕೊಳ್ಳಬೇಕಾದರೆ ’ಡ್ರೈವ್’ ಅಪ್ಲಿಕೇಷನ್ ಬಳಸಿಕೊಳ್ಳಬೇಕೆಂದು ಸೂಚಿಸಿದೆ. ಇದು ಈಗಾಗಲೆ ಜಿಮೇಲ್ ಜತೆಗೆ ಕೆಲಸ ಮಾಡುತ್ತಿದೆ. ಈಗ ಭಾರಿ ಫೈಲ್‌ಗಳನ್ನು ಕಳುಹಿಸಲು ಸಾಧ್ಯವಾಗಲಿದೆ.
ಇತ್ತೀಚೆಗೆ ಜಿಮೇಲ್ ಇದ್ದಕ್ಕಿದ್ದಂತೆ ಸೈನ್‍ಔಟ್ ಆಗುತ್ತಿದೆ ಎಂದು ಬಳಕೆದಾರರಿಂದ ದೂರು ಕೇಳಿಬಂದಿತ್ತು. ಈ ಬಗ್ಗೆ ಗೂಗಲ್ ಪ್ರತಿಕ್ರಿಯಿಸುತ್ತಾ....ಇದನ್ನು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದೆ. ಇದು ಖಾತೆಯ ಭದ್ರತೆ, ಫಿಷಿಂಗ್ ದಾಳಿಗೆ ಸಂಬಂಧಿಸಿದಲ್ಲ ಎಂದು ಸ್ಪಷ್ಟಪಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.