ಬೆಂಗಳೂರು: ಚಿನ್ನ ಖರೀದಿ ಮಾಡಬೇಕೆಂದಿರುವವರಿಗೆ ಇಂದು ಸ್ವಲ್ಪ ಸಿಹಿ, ಸ್ವಲ್ಪ ಕಹಿ ಸುದ್ದಿ. ಇಂದು ಪರಿಶುದ್ಧ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಆದರೆ ಇತರೆ ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರ ಆರಂಭದಲ್ಲಿ ಚಿನ್ನದ ಬೆಲೆ ಸತತವಾಗಿ ಏರಿಕೆಯಾಗಿದ್ದರೂ ವಾರಂತ್ಯಕ್ಕೆ ಇಳಿಕೆಯಾಗಿ ಸಮಾಧಾನ ತಂದಿತ್ತು. ಲಕ್ಷದ ಗಡಿ ದಾಟಿದ್ದ ಚಿನ್ನದ ದರ ಈಗ ಲಕ್ಷದೊಳಗೇ ಬಂದು ನಿಂತಿರುವುದು ಸಮಾಧಾನ. ಆದರೆ ಈಗಲೂ ಚಿನ್ನದ ಏರಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಕೊಂಚ ಏರಿಕೆಯಾಗಿದ್ದು 96,950 ರೂ.ಗೆ ಬಂದು ನಿಂತಿದೆ.
ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 45 ರೂ. ಇಳಿಕೆಯಾಗಿದ್ದು 8,710 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 49 ರೂ. ಇಳಿಕೆಯಾಗಿದ್ದು 9,502 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 36 ರೂ. ಇಳಿಕೆಯಾಗಿದ್ದು 7,127 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರವೂ ದರ ಮೊನ್ನೆಯಿಂದ ಏರಿಳಿತವಾಗುತ್ತಿತ್ತು. ಆದರೆ ಇಂದು ಬೆಳ್ಳಿ ದರವೂ ಇಳಿಕೆಯಾಗಿದೆ. ಚಿನ್ನದ ದರಲ್ಲಿ ಪ್ರತೀ ಕೆ.ಜಿ.ಗೆ ಬರೋಬ್ಬರಿ 1000 ರೂ. ಇಳಿಕೆಯಾಗಿದ್ದು ಇಂದು 97,000 ರೂ.ಗೆ ಬಂದು ತಲುಪಿದೆ.