Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Krishnaveni K

ಗುರುವಾರ, 26 ಜೂನ್ 2025 (10:35 IST)
ಬೆಂಗಳೂರು: ದಾಖಲೆಯ ಬೆಲೆ ಏರಿಕೆ ಕಂಡಿದ್ದ ಚಿನ್ನದ ದರ ನಿನ್ನೆ ಭಾರೀ ಇಳಿಕೆಯಾಗಿದ್ದು, ಗ್ರಾಹಕರು ಸಂತಸಪಡುವಂತಾಗಿತ್ತು. ಇಂದು ಪರಿಶುದ್ಧ ಚಿನ್ನದ ದರದಲ್ಲಿ ಇಳಿಕೆಯಾಗಿದ್ದರೆ ಇತರೆ ಚಿನ್ನದ ದರ ಯಥಾಸ್ಥಿತಿ ಕಾಪಾಡಿಕೊಂಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಪರಿಶುದ್ಧ ಚಿನ್ನದ ದರ ಸದ್ಯಕ್ಕೆ ಇಳಿಕೆಯಾಗಲ್ವೆನೋ ಎಂಬಂತಹ ಪರಿಸ್ಥಿತಿಯಿತ್ತು. ಕಳೆದ ವಾರದಿಂದ ಲಕ್ಷ ಮೀರಿರುವ ಪರಿಶುದ್ಧ ಚಿನ್ನದ ಬೆಲೆ ಈಗಲೂ ಲಕ್ಷದ ಮೇಲೆಯೇ ಇದೆ. ಹಾಗಿದ್ದರೂ ನಿನ್ನೆ ಭಾರೀ ಇಳಿಕೆಯಾಗಿತ್ತು.  ನಿನ್ನೆ ಪರಿಶುದ್ಧ ಚಿನ್ನದ ದರ 1,00, 385.00 ರೂ.ಗಳಷ್ಟಿತ್ತು. ಇಂದು ಪರಿಶುದ್ಧದ ಚಿನ್ನದ ದರ ಕೊಂಚವೇ ಇಳಿಕೆಯಾಗಿದ್ದು 1,00,090.00 ರೂ. ಗಳಾಗಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 09,895 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 9,070 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 7,421 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರದಲ್ಲೂ ಕಳೆದ ಕೆಲವು ದಿನಗಳಿಂದ ದಾಖಲೆಯ ಬೆಲೆ ಏರಿಕೆಯಾಗಿತ್ತು. ನಿನ್ನೆಯಿಂದ ಬೆಳ್ಳಿ ದರವೂ ಇಳಿಕೆಯತ್ತ ಸಾಗಿದೆ. ಇಂದು ಬೆಳ್ಳಿ ದರವೂ ಏರಿಕೆ ಅಥವಾ ಇಳಿಕೆಯಾಗದೇ ಯಥಾಸ್ಥಿತಿಯಲ್ಲಿದೆ.  ಇಂದು ಬೆಳ್ಳಿ ದರ ಪ್ರತೀ ಕೆ.ಜಿ.ಗೆ  1,08, 000 ರೂ. ಗಳಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ