Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Krishnaveni K

ಸೋಮವಾರ, 11 ಆಗಸ್ಟ್ 2025 (10:48 IST)
ಬೆಂಗಳೂರು: ಕಳೆದ ವಾರದ ಅಂತ್ಯಕ್ಕೆ ದಾಖಲೆಯ ಏರಿಕೆ ಕಂಡಿದ್ದ ಪರಿಶುದ್ಧ ಚಿನ್ನದ ಬೆಲೆ ಇಂದು ಕೊಂಚವೇ ಇಳಿಕೆಯಾಗಿದೆ. ಇತರೆ ಚಿನ್ನದ ಬೆಲೆಯಲ್ಲೂ ಇಂದು ಕೊಂಚ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿತ್ತು. ಹಬ್ಬದ ಸಂದರ್ಭದಲ್ಲಿ ಬೆಲೆ ಮಾತ್ರ ಆಕಾಶದೆತ್ತರಕ್ಕೆ ತಲುಪಿತ್ತು. ಆದರೆ ಇಂದು ಪರಿಶುದ್ಧ ಚಿನ್ನ ಮತ್ತು ಇತರೆ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿದೆ. ಹಾಗಿದ್ದರೂ ಪರಿಶುದ್ಧ ಚಿನ್ನದ ದರದಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಪರಿಶುದ್ಧ ಚಿನ್ನದ ದರ ಮೊನ್ನೆ 1,04,630.00 ರೂ.ಗಳಷ್ಟಿತ್ತು. ಆದರೆ ಇಂದು ಕೊಂಚ ಇಳಿಕೆ ಕಂಡಿದ್ದು, 1,04,125.00   ರೂ.ಗಳಾಗಿದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 76 ರೂ. ಇಳಿಕೆಯಾಗಿದ್ದು 10,228 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 70 ರೂ. ಇಳಿಕೆಯಾಗಿದ್ದು 9,375 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 57 ರೂ. ಏರಿಕೆಯಾಗಿದ್ದು 7,671 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಮೊನ್ನೆಯಷ್ಟೇ ಕೊಂಚ ಏರಿಕೆಯಾಗಿತ್ತು. ಆದರೆ ಎರಡು-ಮೂರು ದಿನಗಳಿಂದ ಬೆಳ್ಳಿ ದದರ ಯಥಾಸ್ಥಿತಿಯಲ್ಲಿದೆ. ಇಂದು ಬೆಳ್ಳಿ ದರ ಪ್ರತಿ ಕೆ.ಜಿ.ಗೆ 1,17, 000 ರೂ. ಗಳಷ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ