ಬೆಂಗಳೂರು: ಇಡೀ ನಗರವನ್ನೇ ಬೆಚ್ಚಿಬೀಳಿಸಿದ್ದ ಡಾ ಕೃತಿಕಾ ರೆಡ್ಡಿ ಕೊಲೆ ಪ್ರಕರಣದ ಬಗ್ಗೆ ದಿನಕ್ಕೊಂದು ವಿಚಾರ ಹೊರಬೀಳುತ್ತಿದೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿ ಡಾ ಮಹೇಂದ್ರ ರೆಡ್ಡಿ ಏನು ಮಾಡಿದ್ದ ಎಂಬುದು ಈಗ ಬಯಲಾಗಿದೆ.
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಯಾರಿಗೋ ಐ ಹ್ಯಾವ್ ಕಿಲ್ಡ್ ಕೃತಿಕಾ ಎಂದು ಮಹೇಂದ್ರ ರೆಡ್ಡಿ ಮೆಸೇಜ್ ಮಾಡಿದ್ದ ಎಂಬುದು ಫೋನ್ ಪರಿಶೀಲನೆ ವೇಳೆ ಗೊತ್ತಾಗಿತ್ತು. ಇದೀಗ ಕೃತಿಕಾ ಕೊಲೆ ಮಾಡಿದ ಬಳಿಕ ಮಹೇಂದ್ರ ಏನು ಮಾಡಿದ್ದ ಎಂಬುದು ಗೊತ್ತಾಗಿದೆ.
ಮಹೇಂದ್ರ ರೆಡ್ಡಿಗೆ ಪತ್ನಿಯನ್ನು ಕೊಲೆ ಮಾಡಿದ ಬಳಕ ಭಯ ಶುರುವಾಗಿತ್ತು. ಕನಸಿನಲ್ಲೂ ಪತ್ನಿ ಬರುತ್ತಿದ್ದಳಂತೆ. ಇದೇ ಕಾರಣಕ್ಕೆ ಈತ 15 ಕ್ಕೂ ಹೆಚ್ಚು ಪ್ರಮುಖ ದೇವಾಲಯಗಳಿಗೆ ಸುತ್ತಿ ಪೂಜೆ ಮಾಡಿಸಿಕೊಂಡು ಪ್ರಸಾದ ಇಟ್ಟುಕೊಂಡಿದ್ದ.
ಆತನ ಜೇಬಿನಲ್ಲೇ ಪ್ರಸಾದ ಇಟ್ಟುಕೊಂಡು ಓಡಾಡುತ್ತಿದ್ದ. ಮಲಗುವಾಗ ಕನಸಿನಲ್ಲೂ ಕೃತಿಕಾ ಕಾಡುತ್ತಿದ್ದಳು ಎಂದು ಭಯ ಬಿದ್ದು ತಲೆದಿಂಬಿನ ಕೆಳಗೂ ಪ್ರಸಾದ ಇಟ್ಟುಕೊಂಡೇ ಮಲಗುತ್ತಿದ್ದನಂತೆ. ಪೊಲೀಸರು ಅರೆಸ್ಟ್ ಮಾಡುವಾಗಲೂ ಆತನ ಬ್ಯಾಗ್ ನಲ್ಲಿ ಪ್ರಸಾದವಿಟ್ಟುಕೊಂಡಿದ್ದನಂತೆ. ಪೊಲೀಸರು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಕೃತಿಕಾ ಕನಸಿನಲ್ಲೂ ಕಾಡುತ್ತಿದ್ದಳು. ಅದಕ್ಕೆ ದೇವಸ್ಥಾನಕ್ಕೆ ಹೋಗಿದ್ದ ವಿಚಾರ ಬಾಯಿಬಿಟ್ಟಿದ್ದಾನೆ.