Gold Price Today: ಚಿನ್ನದ ದರ ಇಂದು ಮತ್ತಷ್ಟು ಇಳಿಕೆ

Krishnaveni K

ಶನಿವಾರ, 3 ಮೇ 2025 (12:17 IST)
ಬೆಂಗಳೂರು: ಹಬ್ಬಗಳೆಲ್ಲಾ ಮುಗಿದ ಬೆನ್ನಲ್ಲೇ ಚಿನ್ನದ ದರ ನಿಧಾನವಾಗಿ ಇಳಿಕೆಯತ್ತ ಸಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ದರ ಕೊಂಚ ಇಳಿಕೆಯಾಗಿತ್ತು. ಇಂದು ಮತ್ತಷ್ಟು ಇಳಿಕೆಯಾಗಿದೆ. ಇಂದು ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಇದರಿಂದ ಗ್ರಾಹಕರು ನಿಜಕ್ಕೂ ಕಂಗಾಲಾಗಿದ್ದರು. ಹಾಗಿದ್ದರೂ ಅಕ್ಷಯ ತೃತೀಯ ದಿನದಂದು ಸಾಕಷ್ಟು ಜನ ಚಿನ್ನ ಖರೀದಿ ಮಾಡಿದ್ದರು. ಇದರ ಬಳಿಕ ಚಿನ್ನದ ಬೆಲೆ ಇಳಿಕೆಯತ್ತ ಸಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ದರ ಯಥಾಸ್ಥಿತಿಯಲ್ಲಿತ್ತು. ನಿನ್ನೆ ಪರಿಶುದ್ಧ ಚಿನ್ನದ ಬೆಲೆ 97,605 ರೂ.ಗಳಷ್ಟೇ ಇತ್ತು. ಇಂದು ಮತ್ತಷ್ಟು ಇಳಿಕೆಯಾಗಿದ್ದು 97,040 ರೂ.ಗೆ ಬಂದು ತಲುಪಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೊಂಚವೇ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 1 ರೂ. ಇಳಿಕೆಯಾಗಿದ್ದು 8,774 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 1 ರೂ. ಇಳಿಕೆಯಾಗಿದ್ದು 9,572 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 1 ಇಳಿಕೆಯಾಗಿದ್ದು 7,179 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ದರವೂ ನಿನ್ನೆಯಿಂದ ಇಳಿಕೆಯತ್ತ ಸಾಗಿದೆ.  ಇಂದೂ ಕೂಡಾ ಬೆಳ್ಳಿ ದರ ಮತ್ತೆ ಇಳಿಕೆಯಾಗಿದೆ. ಇಂದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ 100 ರೂ. ನಷ್ಟು ಇಳಿಕೆಯಾಗಿದ್ದು ಇಂದು 97,900 ರೂ.ಗಳಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ