Video: ಪಾಕಿಸ್ತಾನ ಪ್ರಧಾನಿ ಎದುರೇ ಭಾರತ ಗ್ರೇಟ್, ಮೋದಿ ನನ್ನ ಪ್ರೆಂಡು ಎಂದ ಡೊನಾಲ್ಡ್ ಟ್ರಂಪ್
ಈಜಿಪ್ಟ್ ನಲ್ಲಿ ನಡೆದ ಗಾಜಾ ಶಾಂತಿ ಸಮ್ಮೇಳನದಲ್ಲಿ ಹಲವು ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತವನ್ನು ಹೊಗಳಿದ್ದಾರೆ. ಭಾರತ ಶ್ರೇಷ್ಠ ದೇಶ, ಮೋದಿ ನನ್ನ ಒಳ್ಳೆಯ ಸ್ನೇಹಿತ ಕೂಡಾ. ಈಗ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳೂ ಚೆನ್ನಾಗಿ ಹೊಂದಿಕೊಳ್ಳುತ್ತಿವೆ ಅಲ್ಲವೇ ಎಂದು ಪಾಕ್ ಪ್ರಧಾನಿ ಷರೀಫ್ ಬಳಿ ತಿರುಗಿ ಪ್ರಶ್ನೆ ಮಾಡಿದರು.
ಅದಕ್ಕೆ ಷರೀಫ್ ಕೂಡಾ ಹೌದೌದು ಎಂದು ತಲೆಯಾಡಿಸಿ ಚಪ್ಪಾಳೆ ತಟ್ಟಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಮೊದಲು ಪಾಕಿಸ್ತಾನ ನಾಯಕ ಮತ್ತು ಸೇನಾ ಮುಖ್ಯಸ್ಥನನ್ನೂ ಟ್ರಂಪ್ ಹೊಗಳಿದ್ದರು.
ಈ ಸಭೆಯಲ್ಲಿ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಷರೀಫ್ ಮತ್ತೊಮ್ಮೆ ಟ್ರಂಪ್ ಗುಣಗಾನ ಮಾಡಿದ್ದು ಮುಂದಿನ ಸಾರಿ ನೊಬೆಲ್ ಪ್ರಶಸ್ತಿ ಸಿಗಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ.