ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿಯಿದ್ದು ಚಿನ್ನದ ಬೆಲೆ ಇಂದು ಭಾರೀ ಏರಿಕೆಯಾಗಿದೆ. ಇಂದು ಬೆಲೆ ದಾಖಲೆಯ ಮಟ್ಟಕ್ಕೆ ತಲುಪಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಿದ್ದು ದಾಖಲೆಯ ಮಟ್ಟಕ್ಕೆ ತಲುಪಿದೆ. ಈಗಂತೂ ಮಧ್ಯಮ ವರ್ಗದವರಿಗೆ ಚಿನ್ನ ಕೊಳ್ಳುವುದು ಕನಸೇ ಎಂಬಂತಾಗಿದೆ. ಅದರಲ್ಲೂ ಈಗ ಹಬ್ಬದ ಸೀಸನ್ ಆಗಿರುವುದರಿಂದ ಚಿನ್ನ ಕೊಳ್ಳುವವರ ಸಂಖ್ಯೆಯೂ ಹೆಚ್ಚು. ಇಂತಹ ಸಂದರ್ಭದಲ್ಲೇ ಚಿನ್ನದ ಬೆಲೆಯೂ ಗಗನಕ್ಕೇರಿದೆ. ಚಿನ್ನದ ದರ ಸದ್ಯಕ್ಕಂತೂ ಇಳಿಕೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಪರಿಶುದ್ಧ ಚಿನ್ನದ ದರ ನಿನ್ನೆ 1,26.190.00 ರೂ.ಗಳಿತ್ತು. ಆದರೆ ಇಂದು ಭಾರೀ ಏರಿಕೆಯಾಗಿದ್ದು 1,28.070.00 ರೂ.ಗಳಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 328 ರೂ. ಏರಿಕೆಯಾಗಿದ್ದು 12,868 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 300 ರೂ. ಏರಿಕೆಯಾಗಿದ್ದು 11,795 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 246 ರೂ.ಗಳಷ್ಟು ಇಳಿಕೆಯಾಗಿದ್ದು 9,651 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರವೂ ಈಗ ದಾಖಲೆಯ ಮಟ್ಟದಲ್ಲೇ ಇದೆ. ಇಂದಂತೂ ಬೆಲೆ ಗಗನಕ್ಕೇರಿದ್ದು 4,000 ರೂ. ಏರಿಕೆಯಾಗಿದ್ದು ಪ್ರತೀ ಕೆ.ಜಿಗೆ ಬೆಳ್ಳಿ ದರ 1,89,000 ರೂ. ಗಳಷ್ಟಿದೆ.