Gold Price today: ಅಬ್ಬಾ.. ಮಧ್ಯಮ ವರ್ಗದವರಿಗೆ ಚಿನ್ನ ಕೈಗೆಟುಕದ ನಕ್ಷತ್ರ, ಇಲ್ಲಿದೆ ಇಂದಿನ ದರ

Krishnaveni K

ಶನಿವಾರ, 15 ಮಾರ್ಚ್ 2025 (08:40 IST)
ಬೆಂಗಳೂರು: ಮಧ್ಯಮ ವರ್ಗದವರಿಗೆ ಚಿನ್ನ ಖರೀದಿ ಮಾಡುವುದು ಈಗ ಭಾರೀ ಹೊರೆಯಾಗಿದೆ. ಯಾಕೆಂದರೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಇಂದಿನ ಚಿನ್ನ, ಬೆಳ್ಳಿ ದರ ಹೇಗಿದೆ ಇಲ್ಲಿದೆ ವಿವರ.

ಚಿನ್ನದ ದರ ಏರಿಕೆ
ಚಿನ್ನದ ದರದಲ್ಲಿ ನಿನ್ನೆ ಮೊನ್ನೆಗಿಂತ 1 ರೂ.ಗಳಷ್ಟು ಏರಿಕೆಯಾಗಿತ್ತು. ಹಾಗೆ ನೋಡಿದರೆ ನಿನ್ನೆ ಏರಿಕೆಯಾಗಿದ್ದು ಸ್ವಲ್ಪ ಕಡಿಮೆ ಎಂದೇ ಹೇಳಬಹುದು. ಇಂದು  22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆಯಾಗಿ ಪ್ರತೀ ಗ್ರಾಂಗೆ 8,231 ರೂ. ರಷ್ಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 8,979 ರೂ. ರಷ್ಟಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 6,735 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ಬೆಲೆ ನಿನ್ನೆ ಪ್ರತೀ ಗ್ರಾಂಗೆ 103.10 ರೂ.ಗಳಷ್ಟಿತ್ತು. ಇಂದು ಇದು 2 ರೂ.ಗಳಷ್ಟು ಹೆಚ್ಚಾಗಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ