Gold Price today: ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ

Krishnaveni K

ಶುಕ್ರವಾರ, 14 ಮಾರ್ಚ್ 2025 (09:35 IST)
ಬೆಂಗಳೂರು: ಇದೀಗ ಮದುವೆ, ಮುಂಜಿ ಸೀಸನ್. ಅದಕ್ಕೆ ತಕ್ಕಂತೆ ಚಿನ್ನ, ಬೆಳ್ಳಿ ದರದಲ್ಲೂ ಸಾಕಷ್ಟು ಏರಿಕೆಯಾಗುತ್ತಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ ಇಲ್ಲಿದೆ ವಿವರ.

ಚಿನ್ನದ ದರ ಏರಿಕೆ
ಚಿನ್ನದ ದರದಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 55 ರೂ.ಗಳಷ್ಟು ಏರಿಕೆಯಾಗಿ ಪ್ರತೀ ಗ್ರಾಂಗೆ 8,120 ರೂ.ಗಳಷ್ಟಿತ್ತು. ಇಂದು ಇದು 8,121 ರೂ. ರಷ್ಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 8,858 ರೂ.ಗಳಷ್ಟಿದ್ದರೆ ಇಂದು ಒಂದು ರೂಪಾಯಿ ಹೆಚ್ಚಾಗಿದ್ದು 8,859 ರೂ. ರಷ್ಟಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 6,644 ರೂ.ಗಳಷ್ಟಿತ್ತು. ಇಂದು ಇದರ ದರ 6,645 ರೂ.ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ಬೆಲೆ ನಿನ್ನೆ ಪ್ರತೀ ಗ್ರಾಂಗೆ 101 ರೂ.ಗಳಷ್ಟಿತ್ತು. ಇಂದು ಇದು 10 ರೂ.ಗಳಷ್ಟು ಹೆಚ್ಚಾಗಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ