Google pay, Phone pay ಬಳಸುವವರಿಗೆ ಶಾಕ್, ಇನ್ಮುಂದೆ ಇದು ಫ್ರೀ ಅಲ್ಲ

Krishnaveni K

ಶುಕ್ರವಾರ, 21 ಫೆಬ್ರವರಿ 2025 (09:54 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಯುಪಿಐ ಪಾವತಿಗಳಾದ ಗೂಗಲ್ ಪೇ, ಫೋನ್ ಪೇಗಳಿಗೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ ಇದೀಗ ಗೂಗಲ್ ಪೇ, ಫೋನ್ ಪೇ ಬಳಕೆದಾರರಿಗೆ ಶಾಕ್ ಕಾದಿದೆ. ಇನ್ನು ಮುಂದೆ ಇದು ಫ್ರೀ ಆಗಿರಲ್ಲ.

ಯಾವುದೇ ಅಂಗಡಿ, ತಳ್ಳುಗಾಡಿಗಳಲ್ಲೂ ಯುಪಿಐ ಪಾವತಿ ವ್ಯವಸ್ಥೆಯಿರುತ್ತದೆ. ಚಿಲ್ಲರೆ ಸಮಸ್ಯೆಗಳಿಗೂ ಇದರಿಂದ ಪರಿಹಾರ ಸಿಕ್ಕಿದೆ. ಇತ್ತೀಚೆಗಷ್ಟೇ ಬಿಎಂಟಿಸಿ ಬಸ್ ಗಳಲ್ಲೂ ಯುಪಿಐ ಪಾವತಿ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಇನ್ನು ಇದು ಉಚಿತವಾಗಿರಲ್ಲ ಎಂದು ಕೆಲವು ವರದಿಗಳು ಹೇಳುತ್ತಿವೆ.

ಯುಪಿಐ ಮೂಲಕ ನಡೆಸುವ ವಹಿವಾಟುಗಳಿಗೆ ಇಷ್ಟು ದಿನ ಶುಲ್ಕವಿರಲಿಲ್ಲ. ಆದರೆ ಸದ್ಯದಲ್ಲೇ ಈ ಉಚಿತ ಸೇವೆ ನಿಲ್ಲಬಹುದಾಗಿದೆ. ಯುಪಿಐ ಪಾವತಿ ಸಂಸ್ಥೆಗಳು ಈಗಾಗಲೇ ಮೊಬೈಲ್ ರಿಚಾರ್ಜ್ ಗೆ ಶುಲ್ಕ ವಿಧಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪಾವತಿಗೂ ಶುಲ್ಕ ಪಾವತಿಸಬೇಕಾಗಿ ಬರಲಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವ್ಯವಾಹರಗಳಿಗೆ ಸಂಸ್ಕರಣಾ ಶುಲ್ಕ ಎಂಬ ಪ್ರಕ್ರಿಯೆಯಲ್ಲಿ ಜಿಎಸ್ ಟಿ ಕೂಡಾ ಸೇರಿದೆ. ಇದುವರೆಗೆ ಗ್ಯಾಸ್, ವಿದ್ಯುತ್ ಬಿಲ್ ಎಂದು ಎಲ್ಲವನ್ನೂ ಉಚಿತವಾಗಿ ಪಾವತಿ ಮಾಡಬಹುದಿತ್ತು. ಆದರೆ ಇನ್ನು ಮುಂದೆ ಇದಕ್ಕೂ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿ ಬರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ