ಬೆಂಗಳೂರು: ದೇಶದಲ್ಲೆಡೆ ಟೊಮೆಟೋ ಬೆಲೆ ಗಗನಕ್ಕೇರಿ ಸಾರು, ರಸಂ ಮಾಡದ ಪರಿಸ್ಥಿತಿಗೆ ಬಂದಿತ್ತು ಗೃಹಿಣಿಯರ ಪರಿಸ್ಥಿತಿ. ಆದರೆ ಈಗ ಕೊಂಚ ಪರಿಸ್ಥಿತಿ ಸುಧಾರಿಸುತ್ತಿದ್ದು ಗ್ರಾಹಕರ ಮೊಗದಲ್ಲಿ ನಗು ಮೂಡುತ್ತಿದೆ.
ಹೌದು, ಇನ್ನು ಟೊಮೆಟೋ ಖರೀದಿರಾರು ಕೊಂಚ ಉಸಿರಾಡಬಹುದು. ಒಂದು ಕೆ.ಜಿಗೆ 100 ರೂ.ವರೆಗೆ ತಲುಪಿದ್ದ ಟೊಮೆಟೋ ಬೆಲೆ ಇದೀಗ ನಿಧಾನವಾಗಿ ಇಳಿಕೆಯಾಗುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಟೊಮೆಟೋ ಬೆಲೆ 80 ರಷ್ಟು ಇದ್ದಿದ್ದು, 50 ರೂ.ಗೆ ಇಳಿಕೆಯಾಗಿದೆ.
ಇನ್ನೂ ಎರಡು ವಾರಗಳಲ್ಲಿ ಟೊಮೆಟೋ ದರ ಸಹಜ ಸ್ಥಿತಿಗೆ ಬರಬಹುದು ಎಂದು ಮಾರುಕಟ್ಟೆ ತಜ್ಞರು ಲೆಕ್ಕ ಹಾಕಿದ್ದಾರೆ. ಅಂದರೆ ಹಬ್ಬಗಳ ಸಂದರ್ಭಕ್ಕೆ ಟೊಮೆಟೊ ಬೆಲೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಟೊಮೆಟೋ ಸರಬರಾಜು ಏರುವ ನಿರೀಕ್ಷೆಯಿದೆ.