ಗುಡ್ ನ್ಯೂಸ್; ಇನ್ನುಮುಂದೆ ಎಟಿಎಂಗಳಿಂದ ಹಣ ತೆಗೆಯಲು ಕಾರ್ಡ್ ಗಳು ಬೇಕಾಗಿಲ್ಲವಂತೆ
ಶನಿವಾರ, 27 ಅಕ್ಟೋಬರ್ 2018 (12:13 IST)
ನವದೆಹಲಿ : ಗ್ರಾಹಕರು ಎಟಿಎಂಗಳಿಂದ ಹಣ ತೆಗೆಯಲು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ ಇನ್ನುಮುಂದೆ ಈ ತೊಂದರೆ ಇಲ್ಲ.
ಹೌದು. ನಂತರದ ದಿನಗಳಲ್ಲಿ ಎಟಿಎಂಗಳಿಂದ ಹಣ ತೆಗೆಯಲು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಬೇಕಾಗಿಲ್ಲ. ಅದಕ್ಕಾಗಿ ಹೊಸ ತಂತ್ರಜ್ಞಾನವೊಂದನ್ನು ಸಿದ್ಧಪಡಿಸಲಾಗಿದೆ. ಎಟಿಎಂಗಳಿಂದ ಹಣವನ್ನು ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಡೆಯಬಹುದು. ಪೇಟಿಯಂ, ಯುಪಿಐ ಸೇರಿದಂತೆ ವಿವಿಧ ಇ-ವ್ಯಾಲೆಟ್ ನಲ್ಲಿರುವ ಈ ಸೌಲಭ್ಯವನ್ನು ಈಗ ಬ್ಯಾಂಕ್ ಖಾತೆಗೂ ಅಳವಡಿಸಲು ಬ್ಯಾಂಕಿಂಗ್ ಕ್ಷೇತ್ರ ಸಿದ್ಧತೆ ನಡೆಸಿದೆ.
ಹಾಗೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ತೆಗೆಯುವಾಗ ಯಾವ ನೋಟುಗಳು ಬೇಕು ಎಂದು ಆಯ್ಕೆ ಮಾಡುವ ಸೌಲಭ್ಯ ಕೂಡ ಇದೆ. ಅಲ್ಲದೇ ಹಣ ಬಿಡಿಸುವುದರೊಂದಿಗೆ ಡಿಡಿ ಪಡೆಯುವುದಕ್ಕೂ ನೂತನ ತಂತ್ರಜ್ಞಾನದಲ್ಲಿ ಅವಕಾಶ ನೀಡಲಾಗುತ್ತದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಕ್ಯೂಆರ್ ಕೋಡ್ ಜತೆ ಬಯೋಮೆಟ್ರಿಕ್ ಅಥವಾ ಫಿಂಗರ್ ಪ್ರಿಂಟ್ ಸ್ಕ್ಯಾನ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.