ಆರ್ಥಿಕತೆ ಪುನಶ್ಚೇತನಕ್ಕೆ ಆರ್‌ಬಿಐ ದಿಟ್ಟ ಕ್ರಮ: ಐದು ವರ್ಷಗಳ ಬಳಿಕ ರೆಪೊ ದರ ಕಡಿತ

Sampriya

ಶುಕ್ರವಾರ, 7 ಫೆಬ್ರವರಿ 2025 (14:29 IST)
Photo Courtesy X
ನವದೆಹಲಿ: ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಹತ್ವದ ಕ್ರಮಕೈಗೊಂಡಿದೆ. ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಬಡ್ಡಿ ದರಗಳನ್ನು ಕಡಿತ ಮಾಡಿದೆ.

 ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ಐದು ವರ್ಷಗಳ ಬಳಿಕ  ರೆಪೊ ದರ  ಕಡಿಮೆ ಮಾಡಿದೆ. 2020ರ ಮೇ ತಿಂಗಳಲ್ಲಿ ಕೊನೆಯದಾಗಿ ಕಡಿಮೆ ಮಾಡಲಾಗಿತ್ತು. ಅದಾದ ಬಳಿಕ ನಡೆದ 11 ನೀತಿ ಸಭೆಗಳಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ತಂದಿರಲಿಲ್ಲ.

ಈ ಮಾರ್ಚ್‌ನಲ್ಲಿ ಕೊನೆಗೊಳ್ಳುವ ಹಣಕಾಸು ವರ್ಷದ ನೈಜ ಜಿಡಿಪಿ ಬೆಳವಣಿಗೆ ಶೇ 6.4  ಎಂದು ಅಂದಾಜಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ನಂತರ ಐದು ವರ್ಷಗಳಲ್ಲಿ ಕೇಂದ್ರ ಬ್ಯಾಂಕ್ ಮಾಡಿದ ಮೊದಲ ದರ ಕಡಿತ ಇದಾಗಿದೆ.

ಮುಂಬರುವ ಹಣಕಾಸು ವರ್ಷದಲ್ಲಿ ನಿರೀಕ್ಷಿತ ನೈಜ ಬೆಳವಣಿಗೆ ಮೊದಲ ತ್ರೈಮಾಸಿಕದಲ್ಲಿ ಶೇ 6.7, ಎರಡನೇ ತ್ರೈಮಾಸಿಕದಲ್ಲಿ ಶೇ7, ಮೂರನೇ ತ್ರೈಮಾಸಿಕದಲ್ಲಿ ಶೇ 6.5 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.5 ಎಂದು ಅವರು ಅಂದಾಜಿಸಿದ್ದಾರೆ.

ಇಂದು ಬೆಳಗಿನ ವಹಿವಾಟು ಆರಂಭಕ್ಕೆ ಸೆನ್ಸೆಕ್ಸ್ ಕನಿಷ್ಠ 77,730 ಮತ್ತು ಗರಿಷ್ಠ 78,357 ರ ನಡುವೆ ಏರಿಳಿತಗೊಂಡಿತು, ಆದರೆ ನಿಫ್ಟಿ ಕನಿಷ್ಠ 23,439.60 ಮತ್ತು ಗರಿಷ್ಠ 23,694.50ರ ನಡುವೆ ತಲುಪಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ