ಲಕ್ಕಿ ಗ್ರಾಹಕ್ ಯೋಜನೆ ಇಂದು (ಡಿ.25) ಪ್ರಾರಂಭ

ಭಾನುವಾರ, 25 ಡಿಸೆಂಬರ್ 2016 (11:32 IST)
ಜನರನ್ನು ಡಿಜಿಟಲ್ ಪಾವತಿ ಮಾಡುವಂತೆ ಪ್ರೋತ್ಸಾಹಿಸಲು ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಲಕ್ಕಿ ಗ್ರಾಹಕ್ ಯೋಜನೆ ಭಾನುವಾರ ಆರಂಭವಾಗಲಿದೆ. ಇದರ ಮೂಲಕ ರೂ.1,000ದಿಂದ ರೂ.15,000ದವರೆಗೂ ಖರ್ಚು ಮಾಡಿದ ಗ್ರಾಹಕರು ಲಾಟರಿ ಮೂಲಕ ಗೆದ್ದರೆ ಅವರ ಹಣ ವಾಪಸ್ ಕೊಡೋ ಅವಕಾಶ ಇದೆ.
 
ನೂರು ದಿನಗಳ ಕಾಲ ಈ ಕ್ಯಾಶ್‍ಬ್ಯಾಕ್ ಯೋಜನೆ ಜಾರಿಯಲ್ಲಿರುತ್ತದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಈ ಡ್ರಾ ಪ್ರಾರಂಭಿಸಲಿದ್ದಾರೆ. ಡಿಜಿಟಲ್ ಹಣ ಪಾವತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ದಿನಕ್ಕೊಂದು ಪಟ್ಟಣದಂತೆ 100 ಪಟ್ಟಣಗಳಲ್ಲಿ 100 ದಿನ ಈ ಕಾರ್ಯಕ್ರಮ ನಡೆಯಲಿದೆ.
 
ನೀತಿ ಆಯೋಗ ಈ ಕಾರ್ಯಕ್ರಮ ನಡೆಸಲಿದೆ. ಜನರನ್ನು ಡಿಜಿಟಲ್ ಪಾವತಿ ಕಡೆಗೆ ಕಳುಹಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಇದಕ್ಕಾಗಿ ಸರಕಾರ ಸಹ ವಿಶೇಷ ಬಹುಮಾನಗಳನ್ನು ಕೊಡಲಿದೆ. ಲಕ್ಕಿ ಗ್ರಾಹಕ ಯೋಜನೆ ವಿಜೇತರಿಗೆ ಪ್ರತಿದಿನ, ವಾರಕ್ಕೊಮ್ಮೆ ಆಯ್ಕೆ ಮಾಡಲಾಗುತ್ತದೆ. ಏಪ್ರಿಲ್ 14, 2017ರಂದು ಮೆಗಾ ಡ್ರಾ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ವ್ಯಕ್ತವಾದ ಬೆಂಬಲದ ಆಧಾರದ ಮೇಲೆ ಇದನ್ನು ಮುಂದುವರಿಸುವ ಬಗ್ಗೆ ಪರಿಶೀಲಿಸಲಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ