ಕೇಂದ್ರ ಸರಕಾರದ ವಿರುದ್ಧ ಸೆಪ್ಟೆಂಬರ್ 2 ರಂದು ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಬುಧವಾರ, 31 ಆಗಸ್ಟ್ 2016 (12:54 IST)
ಕೇಂದ್ರ ಸರಕಾರ ಕಾರ್ಮಿಕರ ವೇತನದಲ್ಲಿ ಶೇ,42 ರಷ್ಟು ಹೆಚ್ಚಳಗೊಳಿಸಿದ್ದಲ್ಲದೇ ಎರಡು ವರ್ಷಗಳ ಬೋನಸ್ ನೀಡುವುದಾಗಿ ಘೋಷಿಸಿದ್ದರೂ ಕನಿಷ್ಠ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಕಾರ್ಮಿಕ ಸಂಘಟನೆಗಳು, ಈಗಾಗಲೇ ನಿರ್ಧರಿಸಿದಂತೆ ಸೆಪ್ಟೆಂಬರ್ 2ರಂದು ರಾಷ್ಟ್ರವ್ಯಾಪ್ತಿ ಮುಷ್ಕರ ಕೈಗೊಳ್ಳುವುದಾಗಿ ತಿಳಿಸಿವೆ. 
 
ಕೇಂದ್ರ ಸರಕಾರದ ಕುಶಲಕರ್ಮಿಗಳಲ್ಲದ ಕೃಷಿಯೇತರ ಕಾರ್ಮಿಕರ ಕನಿಷ್ಠ ದಿನಗೂಲಿಯನ್ನು ಪ್ರಸ್ತುತವಿರುವ 246 ರೂಪಾಯಿಗಳಿಂದ 350 ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. 
 
ಜೊತೆಗೆ, ಸರಕಾರಿ ನೌಕರರ 2014-15 ಹಾಗೂ 2015-16 ರ ಸಾಲಿನ ಪರಿಷ್ಕೃತ ವೇತನಗಳ ಪ್ರಕಾರ ಒಟ್ಟು 1,920 ಕೋಟಿ ರೂಪಾಯಿ ಬೋನಸ್‌ನ್ನು ಸಹ ನೀಡಲಾಗುತ್ತದೆ ಎಂದು ಹೇಳಿದರು.  
 
45 ದಿನಗಳಲ್ಲಿ ಟ್ರೇಡ್ ಯೂನಿಯನ್ ನೋಂದಣಿ ಪೂರ್ಣಗೊಂಡ ಖಾತರಿ ರಾಜ್ಯಗಳಿಗೆ ಸಲಹೆಗಾರರನ್ನು 
 
ಮಾಸಿಕ ಕನಿಷ್ಠ ವೇತನ 18 ಸಾವಿರ ಅಥವಾ ಕನಿಷ್ಠ ದಿನಗೂಲಿಯನ್ನು 692 ರೂಪಾಯಿಗಳಿಗೆ ಏರಿಕೆ ಹಾಗೂ ಕನಿಷ್ಠ ಮಾಸಿಕ ಪಿಂಚಣಿಯನ್ನು 3 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡುವ ಪ್ರಸ್ತಾವನೆಯನ್ನು ಸರಕಾರ ಒಪ್ಪದ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ಸೆಪ್ಟೆಂಬರ್ 2 ರಂದು ಮುಷ್ಕರಕ್ಕೆ ಕರೆ ನೀಡಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ