ಎಚ್1 ಬಿ ವೀಸಾ ಸಮಸ್ಯೆಯನ್ನು ಪರಿಷ್ಕರಿಸುತ್ತೇವೆ

ಶನಿವಾರ, 11 ಫೆಬ್ರವರಿ 2017 (08:48 IST)
ಎಚ್1 ಬಿ ವೀಸಾ ಸಮಸ್ಯೆಯನ್ನು ಎದುರಿಸುತ್ತಿರುವ ಟೆಕ್ ಉದ್ಯೋಗಿಗಳಿಗೆ ಶೀಘ್ರದಲ್ಲೇ ಭಾರತ ಪರಿಷ್ಕಾರ ತೋರಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಅಮೆರಿಕ ಪ್ರತಿನಿಧಿಗಳ ಸಭೆಯಲ್ಲಿ ಎಚ್1 ಬಿ ವೀಸಾ ತಿದ್ದುಪಡೆ  ಮಸೂದೆ ತಂದಿದ್ದು ಗೊತ್ತೇ ಇದೆ.
 
ಐಟಿ ಕ್ಷೇತ್ರ ಎದುರಿಸುತ್ತಿರುವ ಈ ಸಮಸ್ಯೆಯನ್ನು ಪರಿಷ್ಕರಿಸಲು ವಿದೇಶಾಂಗ ಸಚಿವಾಲಯದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಭಾರತದೊಂದಿಗೆ ಅಮೆರಿಕ ವಿದೇಶಾಂಗ ಸಚಿವಾಲಯ ಸಹ ಈ ಸಮಸ್ಯೆ ಪರಿಷ್ಕರಿಸಲು ಪೂರ್ಣ ಸಹಕಾರ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.
 
ಭಾರತದ ಐಟಿ ಕಂಪೆನಿಗಳು ಅಮೆರಿಕದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅವೆಲ್ಲಾ ಅಮೆರಿಕ ಸರಕಾರಕ್ಕೆ ಸುಮಾರು 20 ದಶಲಕ್ಷ ಡಾಲರ್‌ವರೆಗು ತೆರಿಗೆ ಕಟ್ಟುತ್ತಿವೆ. 4 ಲಕ್ಷಕ್ಕೂ ಅಧಿಕ ಮಂದಿಗೆ ಭಾರತದಲ್ಲಿ ಉದ್ಯೋಗ ಕಲ್ಪಿಸಿವೆ. ಫಾರ್ಚೂನ್ 500 ಕಂಪೆನಿಗಳಿಗೆ ಸಮಾನವಾಗಿ ಅತ್ಯುನ್ನತ ಪ್ರಮಾಣಗಳೊಂದಿಗೆ ಸೇವೆಗಳನ್ನು ನೀಡುತ್ತಿವೆ ಎಂದಿದ್ದಾರೆ. ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ