ಪ್ಲೇಸ್ಟೋರ್ ನ ಈ 4 ಆ್ಯಪ್ ಗಳನ್ನು ಇನ್ ​ಸ್ಟಾಲ್​​​ ಮಾಡಿಕೊಂಡರೆ ಹ್ಯಾಕರ್ ​​​ಗಳಿಗೆ ನಿಮ್ಮ ಮೊಬೈಲ್ ಮಾಹಿತಿ ಲಭಿಸುತ್ತದೆಯಂತೆ!

ಶನಿವಾರ, 11 ಮೇ 2019 (07:45 IST)
ಬೆಂಗಳೂರು : ಸ್ಮಾರ್ಟ್ ​ಫೋನ್​ ಕಾರ್ಯಚರಣೆಯ ವೇಗ ಹೆಚ್ಚಿಸುವ ಭರವಸೆ ನೀಡುವ ಮೂಲಕ ಬಳಕೆದಾರರನ್ನು ವಂಚಿಸಲು ಹ್ಯಾಕರ್​ ಗಳು ಈ ನಕಲಿ ಆ್ಯಪ್ ​ಗಳನ್ನು ಪ್ಲೇಸ್ಟೋರ್​ ಗೆ ಬಿಟ್ಟಿದ್ದಾರೆ  ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.




ಸಾಮಾನ್ಯವಾಗಿ ಯಾವುದೇ ಆ್ಯಪ್​ ಪ್ಲೇಸ್ಟೋರ್​ ಗೆ ಬರುವ ಮೊದಲು ಗೂಗಲ್​ ಅದನ್ನು ಪರಿಶೀಲಿಸಿ ನಂತರ ಪ್ಲೇಸ್ಟೋರ್​ ಗೆ ಕಾಲಿಡಲು ಅವಕಾಶ ನೀಡುತ್ತದೆ. ಆದರೆ ಹ್ಯಾಕರ್​ ಗಳು ಗೂಗಲ್​ ನ ಕಣ್ಣು ತಪ್ಪಿಸಿ ಪ್ಲೇಸ್ಟೋರ್​ ಗೆ ಆ್ಯಪ್ ​ಗಳನ್ನು ಹಾಕುತ್ತಿದ್ದಾರೆ.


ಸೆಲ್ಫಿ ಕ್ಯಾಮೆರಾ, ಟೋಟಲ್​ ಕ್ಲೀನರ್​, ಸ್ಮಾರ್ಟ್​ ಕೂಲರ್​, ರ್ಯಾಮ್​ ಮಾಸ್ಟರ್​ ಆ್ಯಪ್​ಗಳು ಬಳಕೆದಾರನ ಮಾಹಿತಿಯನ್ನು ಕಸಿದುಕೊಳ್ಳುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಈ ಆ್ಯಪ್ ​ಗಳನ್ನು ಇನ್ ​ಸ್ಟಾಲ್​​​ ಮಾಡಿಕೊಂಡ ಬಳಿಕ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಬಳಕೆದಾರ ಗಮನಿಸದೆ ಆ ಜಾಹೀರಾತುಗಳ ಮೇಲೆ ಕ್ಲಿಕ್​ ಮಾಡಿದಾಗ ​ ಹ್ಯಾಕರ್ ​​​ಗಳಿಗೆ ನಿಮ್ಮ ಮೊಬೈಲ್​ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ ಎಂದು ಇತ್ತೀಚಿನ ಅಧ್ಯಯನದ ಮೂಲಕ ಸಾಬೀತಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ