ಜಿಎಸ್‌ಟಿ ತೆರಿಗೆ ಪಾವತಿ ಬಗ್ಗೆ ನಿಮಗೆಷ್ಟು ಗೊತ್ತು?

ಬುಧವಾರ, 20 ಡಿಸೆಂಬರ್ 2017 (14:16 IST)
ಹೊಸ ತೆರಿಗೆ ಆಡಳಿತದ ಐಟಿ ಬೆನ್ನೆಲುಬಾಗಿರುವ ಸರಕು ಮತ್ತು ಸೇವೆಗಳ ತೆರಿಗೆ ಜಾಲವು (ಜಿಎಸ್‌ಟಿಎನ್), ತೆರಿಗೆದಾರರು ತ್ರೈಮಾಸಿಕ ಅಥವಾ ಮಾಸಿಕ ಆಧಾರದ ಮೇಲೆ GSTR 1 ಫಾರ್ಮ್ ಅನ್ನು ಭರ್ತಿ ಮಾಡುವ ಆವರ್ತನದ ಆಯ್ಕೆಗೆ ಅವಕಾಶ ಮಾಡಿಕೊಡುವ ಮೂಲಕ ಅದರ ಪೋರ್ಟಲ್‌ನಲ್ಲಿ ಹೊಸ ಕಾರ್ಯವನ್ನು ಜಾರಿಗೆ ತಂದಿದೆ.
 ಹಿಂದಿನ ಹಣಕಾಸು ವರ್ಷದಲ್ಲಿ ಸುಮಾರು ರೂ. 1.5 ಕೋಟಿ ವಾರ್ಷಿಕ ಒಟ್ಟಾರೆ ವಹಿವಾಟು ಹೊಂದಿರುವ ತೆರಿಗೆದಾರರು ಅಥವಾ ಪ್ರಸ್ತುತ ಹಣಕಾಸು ವರ್ಷದಲ್ಲಿ ನಿರೀಕ್ಷಿತ ಆದಾಯ ಹೊಂದಿದವರು ತ್ರೈಮಾಸಿಕವಾಗಿ ತೆರಿಗೆ ಸಲ್ಲಿಸುವ ಆಯ್ಕೆಯ ಸೌಲಭ್ಯವನ್ನು ಪಡೆಯಬಹುದು. GSTR 1 ತೆರಿಗೆದಾರರ ಎಲ್ಲಾ ಮಾರಾಟಗಳನ್ನು ಸಂಕ್ಷಿಪ್ತಗೊಳಿಸುತ್ತದೆ.
 
23ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರದ ಪ್ರಕಾರ ಇದನ್ನು ಜಾರಿಗೆ ತರಲಾಗಿದೆ. ಈ ಆಯ್ಕೆಯನ್ನು ನೀಡಿದ ನಂತರ, ತೆರಿಗೆದಾರರು ಸೂಕ್ತವಾದ ಹಿಂತಿರುಗಿಸುವಿಕೆ ಅವಧಿಗೆ GSTR 1 ಅನ್ನು ಸಲ್ಲಿಸಬಹುದು, ಸರಕು ಮತ್ತು ಸೇವಾ ತೆರಿಗೆ (GST) ನೆಟ್‌ವರ್ಕ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಮುಂದುವರಿದು, ತ್ರೈಮಾಸಿಕ ಭರ್ತಿ ಮಾಡುವಿಕೆ ಆಯ್ಕೆ ಮಾಡುವ ತೆರಿಗೆದಾರರು ತ್ರೈಮಾಸಿಕದ ಕೊನೆಯ ತಿಂಗಳನ್ನು ಡ್ರಾಪ್ ಡೌನ್ ಮೆನುವಿನಿಂದ ಆಯ್ಕೆ ಮಾಡಬೇಕೆಂದು ತಿಳಿಸಿದೆ. ಇದಲ್ಲದೆ, ಮಾಸಿಕವಾಗಿ ಭರ್ತಿ ಮಾಡುವಿಕೆಯನ್ನು ಆಯ್ಕೆ ಮಾಡುವ ಎಲ್ಲಾ ತೆರಿಗೆದಾರರು ಇದೀಗ ಆಗಸ್ಟ್‌ನಿಂದ ನವೆಂಬರ್‌ವರೆಗೆ GSTR 1 ಫಾರ್ಮ್ ಅನ್ನು ಸಲ್ಲಿಸಬಹುದು. ಹಿಂದಿನ ತಿಂಗಳಿನ ತೆರಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
 
ಜಿಎಸ್‌ಟಿಯನ್ನು ಕಾರ್ಯ ರೂಪಕ್ಕೆ ತರಲು ರಾಜ್ಯ ಸರ್ಕಾರಗಳು, ತೆರಿಗೆದಾರರು ಮತ್ತು ಇತರೆ ಸ್ಟೇಕ್‌‌‌‌‌‌ಹೋಲ್ಡರ್‌‌‌ಗಳು ಸೇರಿದಂತೆ ಕೇಂದ್ರಕ್ಕೆ ಐಟಿ ಮೂಲಸೌಕರ್ಯ ಮತ್ತು ಸೇವೆಗಳನ್ನು ಒದಗಿಸಲು ಜಿಎಸ್‌‌ಟಿಎನ್‌ ಅನ್ನು ಹೊಂದಿಸಲಾಗಿದೆ, ಇದು ಜುಲೈ 1 ರಿಂದ ಜಾರಿಗೊಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ