ಆರ್ಥಿಕತೆ ಕುಸಿತ: ಪ್ರಧಾನಿ ಮೋದಿ, ಜೇಟ್ಲಿ ವಿರುದ್ಧ ಯಶ್ವಂತ್ ಸಿನ್ಹಾ ವಾಗ್ದಾಳಿ

ಮಂಗಳವಾರ, 14 ನವೆಂಬರ್ 2017 (17:20 IST)
ಕೇಂದ್ರ ಸರಕಾರದ ನೋಟು ನಿಷೇಧ ಮತ್ತು ಜಿಎಸ್‌ಟಿ ದೇಶದ ಆರ್ಥಿಕತೆಗೆ ಮಾರಕವಾಗಿ ಪರಿಣಮಿಸಿವೆ ಎಂದು ಖ್ಯಾತ ಆರ್ಥಿಕ ತಜ್ಞ ಬಿಜೆಪಿ ಮುಖಂಡ ಮಾಜಿ ವಿತ್ತಸಚಿವ ಯಶ್ವಂತ್ ಸಿನ್ಹಾ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರುಸ ಕೇಂದ್ರದ ವಿತ್ತಖಾತೆ ಸಚಿವ ಅರುಣ್ ಜೇಟ್ಲಿ ದೇಶದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ನೋಟು ನಿಷೇಧ ಮತ್ತು ಅವೈಜ್ಞಾನಿಕ ಜಿಎಸ್‌ಟಿ ತೆರಿಗೆ ಜಾರಿಯಿಂದಾಗಿ ದೇಶದ ಆರ್ಥಿಕತೆ ಕುಸಿದಿದ್ದರಿಂದ ದೇಶದ ಜನತೆ ಜೇಟ್ಲಿ ರಾಜೀನಾಮೆಗೆ ಒತ್ತಾಯಿಸಬೇಕು. ಹಿಂದಿನ ಸರಕಾರದಿಂದ ಬಂದ ಕೆಲ ಸಮಸ್ಯೆಗಳಾದ ಎನ್‌ಪಿಎ ಮತ್ತು 25 ಲಕ್ಷ ಕೋಟಿ ವೆಚ್ಚದ ಯೋಜನೆಗಳ ಬಗ್ಗೆ ತ್ವರಿತವಾಗಿ ಪ್ರಸ್ತುತವಿರುವ ಮೋದಿ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.  
 
ಕಳೆದ ಮೂರುವರೆ ವರ್ಷಗಳಲ್ಲಿ ಸ್ಥಗಿತಗೊಂಡ ಯೋಜನೆಗಳ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾದರೂ, 17-18 ಲಕ್ಷ ಮೌಲ್ಯದ ಯೋಜನೆಗಳು ಇನ್ನೂ ಅರ್ಧಾವಸ್ಥೆಯಲ್ಲಿಯೇ ಉಳಿದಿವೆ ಎಂದು ಹೇಳಿದರು.
 
"ಹಳೆಯ ಯೋಜನೆಗಳು ಮುಂದಕ್ಕೆ ಹೋಗಲಿಲ್ಲ ಮತ್ತು ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ 8 ಲಕ್ಷ ಕೋಟಿಗಳ ಎನ್ಪಿಎ ಇನ್ನೂ ಉಳಿದಿದೆ. ಬೆಳವಣಿಗೆಯ ದರವು ಕುಸಿದಿದೆ ಎಂದು ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ