ಹಾಂಗ್ ಕಾಂಗ್ ಮೂಲದ ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆ ಐಬೆರ್ರಿ, ಇಬೇ ಸಂಸ್ಥೆಯ ಸಹಯೋಗದಲ್ಲಿ ಭಾರತದ ಮಾರುಕಟ್ಟೆಗೆ ಆಕ್ಸಸ್ 4-ಎಕ್ಸ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಆವೃತ್ತಿಯ ಪೋನ್‌ಗಳು ಗ್ರಾಹಕರಿಗೆ 15,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
ಆಕ್ಸಸ್ 4-ಎಕ್ಸ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಹೊಸ ಪೀಳಿಗೆಯ 4ಜಿಬಿ ಡಿಡಿಆರ್‌ಐಐಐ ರ್ಯಾಮ್ ಜೊತೆಗೆ ಹೆಲಿಯೋ ಪಿ 10 ಪ್ರೊಸೆಸರ್ ಹೊಂದಿದೆ. ಈ ಆವೃತ್ತಿಯ ಪೋನ್‌ಗಳು 32 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, 128 ಜಿಬಿ ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.