ಪ್ರಸ್ತುತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಐಡಿಯಾ ಸೆಲ್ಯುಲರ್‌ಗೆ ರೂ.383.87 ಕೋಟಿ ನಷ್ಟ ಸಂಭವಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪೆನಿಗೆ ರೂ.659.35 ಕೋಟಿ ನಿಖರ ಲಾಭ ಬಂದಿದ್ದು ಗಮನಾರ್ಹ ಸಂಗತಿ.
ಹೊಸದಾಗಿ ಟೆಲಿಕಾಂ ವ್ಯಾಪಾರಕ್ಕೆ ಅಡಿಯಿಟ್ಟ ಕಂಪೆನಿಯೊಂದು ಕೊಡುತ್ತಿರುವ ಉಚಿತ ವಾಯ್ಸ್, ಡಾಟಾ ಆಫರ್‌ಗಳ ಕಾರಣ ಉದ್ಯಮ ಏಳುಬೀಳುಗಳನ್ನು ಎದುರಿಸುತ್ತಿದೆ ಎಂದು ಐಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಆ ಕಂಪೆನಿ ರಿಲಯನ್ಸ್ ಜಿಯೋ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಹಾಗಾಗಿ ಕಂಪೆನಿಗಳ ಆರ್ಥಿಕ ಫಲಿತಾಂಶದ ಮೇಲೆ ಇದು ಪ್ರಭಾವ ಬೀರುತ್ತಿದೆ. ಇತಿಹಾಸರಲ್ಲಿ ಮೊದಲ ಬಾರಿಗೆ ದೇಶೀಯ ಮೊಬೈಲ್ ಸೇವೆಗಳ ವ್ಯಾಪಾರದ ಆದಾಯ ಶೇ.3-5ರಷ್ಟು ಕಡಿಮೆಯಾಗಿದೆ ಎಂದು ಐಡಿಯಾ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.