ಬೆಂಗಳೂರು: ನಿನ್ನೆ ರಾತ್ರಿ ದಿಡೀರ್ ಆಗಿ ಜನಪ್ರಿಯ ಸೋಷಿಯಲ್ ಮೀಡಿಯಾ ಪುಟಗಳಾದ ಇನ್ ಸ್ಟಾಗ್ರಾಂ ಮತ್ತು ಫೇಸ್ ಬುಕ್ ಓಪನ್ ಆಗ್ತಾ ಇರಲಿಲ್ಲ. ಇದ್ದಕ್ಕಿದ್ದಂತೆ ಎರಡೂ ಪೇಜ್ ಗಳೂ ಡೌನ್ ಆಗಿಬಿಟ್ಟಿದ್ದವು. ಹೀಗಾಗಿ ಜನ ಟ್ವಿಟರ್ ನತ್ತ ಮುಖ ಮಾಡಿದರು.
ಇನ್ ಸ್ಟಾಗ್ರಾಂ ಜನಪ್ರಿಯವಾದ ಮೇಲೆ ಜನ ಟ್ವಿಟರ್ ನ್ನು ಮರೆತೇಬಿಟ್ಟಿದ್ದರು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಇನ್ ಸ್ಟಾಗ್ರಾಂ ಮತ್ತು ಫೇಸ್ ಬುಕ್ ಎಷ್ಟೇ ಪ್ರಯತ್ನಪಟ್ಟರೂ ತೆರೆಯುತ್ತಿರಲಿಲ್ಲ. ರಿಟ್ರೈ ಎನ್ನುವ ಸಂದೇಶ ಬರುತ್ತಲೇ ಇತ್ತು. ಇದರಿಂದಾಗಿ ಜನ ಟ್ವಿಟರ್ ಮೂಲಕ ತಮ್ಮ ಅಳಲು ತೋಡಿಕೊಳ್ಳಲಾರಂಭಿಸಿದರು.
ಇನ್ ಸ್ಟಾ, ಫೇಸ್ ಬುಕ್ ಯಾಕೆ ಓಪನ್ ಆಗ್ತಿಲ್ಲ ಎಂದು ಸಾವಿರಾರು ಜನ ಕಾಮೆಂಟ್ ಗಳ ಮೇಲೆ ಕಾಮೆಂಟ್ ಮಾಡಲಾರಂಭಿಸಿದರು. ಮತ್ತೆ ಕೆಲವರು ಮೆಮೆಗಳ ಮೂಲಕ ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡರು. ಒಂದು ದಿನ ಈ ಎರಡೂ ಸೋಷಿಯಲ್ ಮೀಡಿಯಾಗಳು ಡೌನ್ ಆಗಿದ್ದಕ್ಕೆ ಜನ ಸಾಗರೋಪಾದಿಯಲ್ಲಿ ಸಂದೇಶ ಶುರು ಮಾಡಿದ್ದರೆಂದರೆ ಈ ಎರಡೂ ಆಪ್ ಗಳಿಗೆ ಎಷ್ಟು ಅಡಿಕ್ಟ್ ಆಗಿದ್ದೇವೆ ಎಂದು ಯೋಚಿಸಿ.
ಸರ್ವರ್ ಸಮಸ್ಯೆಯಿಂದಾಗಿ ಎರಡೂ ಪೇಜ್ ಗಳೂ ಡೌನ್ ಆಗಿತ್ತು. ಇದಕ್ಕೆ ಮೊದಲೂ ಕೆಲವೊಮ್ಮೆ ಈ ರೀತಿ ಆಗಿದ್ದಿದೆ. ತಾಂತ್ರಿಕ ಸಮಸ್ಯೆಯಿಂದ ಸೋಷಿಯಲ್ ಮೀಡಿಯಾ ಪುಟಗಳು ದೇಶದಾದ್ಯಂತ ಡೌನ್ ಆಗಿದ್ದ ಉದಾಹರಣೆಯಿದೆ. ಇಂದೂ ಅದೇ ರೀತಿ ಆಗಿದೆ. ಆದರೆ ಇದೆಲ್ಲದರ ನಡುವೆ ಟ್ವಿಟರ್ ಮಾತ್ರ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರಿಂದ ಹೀರೋ ಆಗಿ ಮೆರೆಯಿತು.