ಒಂದೇ ತಿಂಗಳಲ್ಲಿ ಮೂರನೇ ಬಾರಿಗೆ ಟ್ವಿಟರ್, ಇನ್ ಸ್ಟಾಗ್ರಾಂ ಡೌನ್

Krishnaveni K

ಶುಕ್ರವಾರ, 22 ಮಾರ್ಚ್ 2024 (14:10 IST)
ಬೆಂಗಳೂರು: ಸಾಮಾನ್ಯ ಜನರು ದೈನಂದಿನವಾಗಿ ಹೆಚ್ಚಾಗಿ ಬಳಕೆ ಮಾಡುವ ಜನಪ್ರಿಯ ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ ಗಳಾದ ಇನ್ ಸ್ಟಾಗ್ರಾಂ ಮತ್ತು ಟ್ವಿಟರ್ ಮತ್ತೆ ಡೌನ್ ಆಗಿದೆ.

ಕಳೆದ ಒಂದು ತಿಂಗಳಲ್ಲಿ ಇದು ಮೂರನೇ ಬಾರಿಗೆ ಹೀಗಾಗುತ್ತಿದೆ. ಸಮಯ ಕಳೆಯಲು ಅಥವಾ ತಮ್ಮ ಕೆಲಸ ಕಾರ್ಯಗಳಿಗಾಗಿ ಜನ ಈ ಎರಡು ಸೈಟ್ ಗಳನ್ನು ಹೆಚ್ಚು ಬಳಕೆ ಮಾಡುತ್ತಾರೆ. ಆದರೆ ಪದೇ ಪದೇ ಸರ್ವರ್ ಸಮಸ್ಯೆಯಿಂದಾಗಿ ಈ ಎರಡೂ ಆಪ್ ಗಳು ಕೈ ಕೊಡುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನಾಲ್ಕು ದಿನಗಳ ಹಿಂದಷ್ಟೇ ಒಮ್ಮೆ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಡೌನ್ ಆಗಿತ್ತು. ಇದಕ್ಕೆ ಮೊದಲು ಎರಡು ವಾರಗಳ ಹಿಂದೆಯೂ ಇನ್ ಸ್ಟಾಗ್ರಾಂ ಮತ್ತು ಫೇಸ್ ಬುಕ್ ಖಾತೆಗಳು ಡೌನ್ ಆಗಿದ್ದವು. ಆಗಲೂ ಜನ ತಮ್ಮ ಆಕ್ರೋಶ ಹೊರಹಾಕಿದ್ದರು. ಇದೀಗ ಮತ್ತೊಮ್ಮೆ ಇದೇ ರೀತಿ ಆಗಿದೆ.

ಮೊದಲು ಇನ್ ಸ್ಟಾಗ್ರಾಂ ಮಾತ್ರ ಡೌನ್ ಆಗಿತ್ತು. ಅದಾಗಿ ಕೆಲವೇ ಕ್ಷಣಗಳಲ್ಲಿ ಟ್ವಿಟರ್ ಕೂಡಾ ಡೌನ್ ಆಗಿದೆ. ದೇಶದಾದ್ಯಂತ ಸರ್ವರ್ ಕೈ ಕೊಟ್ಟಿದ್ದು ಎರಡೂ ಜನಪ್ರಿಯ ಸೋಷಿಯಲ್ ಮೀಡಿಯಾ ಆಪ್ ಗಳು ಸ್ಥಗಿತಗೊಂಡಿದೆ. ಇದಕ್ಕೀಗ ನಿಖರ ಕಾರಣ ತಿಳಿದುಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ