ಅದಾನಿ ಹಲವು ತಿಂಗಳ ಹಿಂದೆ ವಿಶ್ವದ ನಂ೨ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದು, ಭಾರತದ ಹಿರಿಮೆ-ಗರಿಮೆಯನ್ನು ಜಾಗತಿಕವಾಗಿ ಹೆಚ್ಚಿಸಿ ಬಿಟ್ಟಿದ್ದರು. ಆದ್ರೆ ಅದ್ಯಾಕೋ, ಏನೋ ಕಾಲ ಎಲ್ಲರ ಕಾಲು ಎಳೆಯುತ್ತೆ ಅನ್ನುವಾಗೆ, ಏಕಾಏಕಿಯಾಗಿ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಕುಸಿದು, ಎರಡನೇ ಶ್ರೀಮಂತರ ಪಟ್ಟಿಯಲ್ಲಿದ್ದ, ಅದಾನಿ ಹೋಗಿ ತಲುಪಿದ್ದು ಅದೆಲ್ಲಿಗೆ ಎಂಬುದು ನಿಮಗೆ ಗೊತ್ತೆ ಇದೆ.
ಅದಾನಿಯ ನಸೀಬು ಕೆಟ್ಟಿದ್ದು, ಈ ಹಿಂದೆ ಹಿಂಡನ್‌ಬರ್ಗ್ ಕೊಟ್ಟ ಆ ವರದಿಯಿಂದ. ಹೌದು ಅಲ್ಲಿಂದಲೇ ನೋಡಿ, ಭಾರತದ ಶ್ರೀಮಂತ ಉದ್ಯಮಿಯ ಬಗೆಗಿನ ಅಸಲಿ ಚಿತ್ರಣ ಹೊರಬಿದ್ದಿದ್ದು. ಅಲ್ಲಿಗೆ ಇದೀಗ ಮತ್ತೇ ಅದಾನಿ ಕಂಪನಿಯ ಷೇರುಗಳು ಶೇ. ೮೫ರಷ್ಟು ಕುಸಿದಿದ್ದು, ಈ ಹಿಂದೆ ಹಿಂಡನ್‌ಬರ್ಗ್ ವರದಿಯ ಭವಿಷ್ಯವೇ ನಿಜವಾಯ್ತಾ ಅನ್ನುವ ಗುಮಾನಿಯನ್ನು ಹುಟ್ಟು ಹಾಕಿದೆ.
ಅದಾನಿ ಗ್ರೂಪ್‌ನ ಬುಡವನ್ನೇ ಅಲ್ಲಾಡಿಸಿದ್ದ ಹಿಂಡನ್‌ಬರ್ಗ್ ವರದಿ, ಜಾಗತಿಕವಾಗಿ ತಲ್ಲಣವನ್ನು ಸೃಷ್ಟಿಸಿತ್ತು. ಈ ಹಿಂದೆ ಈ ವರದಿ ನೀಡಿದ್ದ ಎಚ್ಚರಿಕೆಯಂತೆ, ಇದೀಗ ಅದಾನಿ ಗ್ರೂಪ್‌ನ ಷೇರುಗಳು ಶೇ. ೮೫ರಷ್ಟು ಕುಸಿತ ಕಂಡಿದೆ. ಅಲ್ಲಿಗೆ ಅಸಲಿ ಸತ್ಯ ಏನೆಂಬುದು ಹೊರಬಿದ್ದಾಂತಾಗಿದೆ…?