ಹೊರಹೋಗುವ ವಾಯ್ಸ್ ಕಾಲ್ ಗಳಿಗೆ ದರ ನಿಗದಿ ಮಾಡಿದ ಜಿಯೋ

ಗುರುವಾರ, 10 ಅಕ್ಟೋಬರ್ 2019 (08:49 IST)
ನವದೆಹಲಿ : ಗ್ರಾಹಕರನ್ನು ಸೆಳೆಯಲು ಹಲವು ಬಗೆಯ ಆಫರ್ ಗಳನ್ನು ನೀಡುತ್ತಿದ್ದ ಜಿಯೋ ಇದೀಗ ಹೊರಹೋಗುವ ವಾಯ್ಸ್ ಕಾಲ್ ಗಳಿಗೆ ದರ ನಿಗದಿ ಮಾಡಲು ಮುಂದಾಗಿರುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
ಹೌದು. ರಿಲಯನ್ಸ್ ಜಿಯೋ ದಲ್ಲಿ ತನಕ ನಿಗದಿತ ಮೊತ್ತ ಪಾವತಿಸಿದರೆ ಒಳಬರುವ ಹಾಗೂ ಹೊರಹೋಗುವ ಕರೆಗಳು ಸಂಪೂರ್ಣ ಉಚಿತವಾಗಿದ್ದರ ಜೊತೆಗೆ ರಿಚಾರ್ಜ್ ಗೆ ಅನುಗುಣವಾಗಿ ಡೇಟಾ ಸಹ ಲಭ್ಯವಾಗುತ್ತಿತ್ತು. ಆದರೆ ಈಗ ಜಿಯೋ ಹೊರತುಪಡಿಸಿ ಇತರೆ ನೆಟ್ವರ್ಕ್ ಗಳಿಗೆ ಇನ್ನು ಮುಂದೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಚಾರ್ಜ್ ಆಗಲಿದೆ, ಇದು ನಿನ್ನೆಯಿಂದಲೇ ಜಾರಿಗೆ ಬಂದಿದೆ.


ಪ್ರಾರಂಭದಲ್ಲಿ ಜಿಯೋ ವಾಯ್ಸ್‌ ಕಾಲ್‌ ಉಚಿತವಾಗಿದ್ದರಿಂದ ನಷ್ಟಕ್ಕೊಳಗಾದ ಇತರ ಟೆಲಿಕಾಂ ಕಂಪೆನಿಗಳಿಗೆ ಶುಲ್ಕ ರೂಪದಲ್ಲಿ ರೂ. 13,500 ಕೋಟಿ ಪಾವತಿಸಬೇಕಾಗಿದೆ. ಇದನ್ನು ತುಂಬಿಕೊಳ್ಳಲು ತನ್ನ ಪ್ರತಿಸ್ಪರ್ಧಿ ಕಂಪನಿಗಳ ನೆಟ್‌ ವರ್ಕ್‌ ಗೆ ಕರೆ ಮಾಡುವುದಕ್ಕೆ ಶುಲ್ಕ ವಿಧಿಸಲು ಆರಂಭಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ