ದಸರಾ, ದೀಪಾವಳಿಗೆ ಜಿಯೋ ಕಡೆಯಿಂದ ಬಂಪರ್ ಆಫರ್

ಭಾನುವಾರ, 6 ಅಕ್ಟೋಬರ್ 2019 (08:33 IST)
ನವದೆಹಲಿ : ದಸರಾ, ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಜಿಯೋ ಬಂಪರ್ ಆಫರವೊಂದನ್ನು ಘೋಷಿಸಿದ್ದು,  ತನ್ನ 4ಜಿ ಎಲ್‍  ಟಿಇ ಫೋನ್ ನ್ನು ಕೇವಲ 699 ರೂ.ಗೆ ನೀಡುತ್ತಿದೆ.
ಇಲ್ಲಿಯತನಕ ಜಿಯೋ ಈ ಫೋನ್ ನ್ನು 1500 ರೂ.ಗೆ ಮಾರಾಟ ಮಾಡುತಿತ್ತು. ಅದರ ಜೊತೆಗೆ ಹಳೆ ಫೋನ್ ಬದಲಾಯಿಸಬೇಕಿತ್ತು. ಆದರೆ ಈಗ ಹಬ್ಬದ ಪ್ರಯುಕ್ತ 4ಜಿ ಎಲ್‍ ಟಿಇ ಫೋನಿನ ಬೆಲೆಯನ್ನು 800 ರೂ. ಕಡಿತಗೊಳಿಸಿ ಹಳೆ ಫೋನ್ ಬದಲಾಯಿಸದೇ ಕೇವಲ 699 ರೂ.ಗೆ ನೀಡುತ್ತಿದೆ.


ಇದರ ಜೊತೆ ಜಿಯೋ 700 ರೂ. ಡೇಟಾವನ್ನು ಉಚಿತವಾಗಿ ನೀಡಲಿದೆ. ಅಲ್ಲದೇ ಎಚ್‍ಡಿ ವಾಯ್ಸ್ ಕಾಲ್ ಜೊತೆ ಜಿಯೋ ಫೋನಿನಲ್ಲಿ ವಿಡಿಯೋ ಕಾಲ್ ಮಾಡಬಹುದಾಗಿದೆ. ಈ ಆಫರ್ ದಸರಾದಿಂದ ದೀಪಾವಳಿಯವರೆಗೆ ಮಾತ್ರ ಇರಲಿದೆ ಎಂದು ಜಿಯೋ ಹೇಳಿದೆ 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ