ಮನೆಯಲ್ಲೇ ಕುಳಿತು ಹಲ್ಲಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ

ಮಂಗಳವಾರ, 8 ಅಕ್ಟೋಬರ್ 2019 (07:52 IST)
ನವದೆಹಲಿ : ಜನರಿಗೆ ಮನೆಯಲ್ಲೇ ಕುಳಿತು ತಮ್ಮ ಹಲ್ಲಿನ ಸಮಸ್ಯೆಗಳಿಗೆ ಪರಿಹಾರ ಮತ್ತು ಸಲಹೆ ಪಡೆಯಲು ಅನುಕೂಲವಾಗುವಂತೆ ವೆಬ್ ಸೈಟ್ ಹಾಗೂ ಮೊಬೈಲ್ ಆಪ್ ವೊಂದನ್ನು  ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಇ-ದಂತಸೇವಾ ಎಂಬ ವೆಬ್ ಸೈಟ್, ಮೊಬೈಲ್ ಆಪ್ ನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಹರ್ಷವರ್ಧನ್ ಬಿಡುಗಡೆ ಮಾಡಿದ್ದಾರೆ. ಇದರಿಂದ ಜನರು ಮನೆಯಲ್ಲಿಯೇ ಕುಳಿತು ತಮ್ಮ ಹಲ್ಲಿನ ಸಮಸ್ಯೆಗೆ ಸಲಹೆ, ಕೆಲವೊಂದಕ್ಕೆ ಪರಿಹಾರವನ್ನು ಪಡೆಯಬಹುದಾಗಿದೆ.


ಈ ಕುರಿತು ಮಾತನಾಡಿದ ಸಚಿವ ಡಾ.ಹರ್ಷವರ್ಧನ್, ಇದು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಅಡಿಯಲ್ಲಿ ಬಿಡುಗಡೆಯಾದ ವೆಬ್ ಸೈಟ್ ಆಗಿದೆ. ಈ ವೆಬ್ ಸೈಟ್, ಮೊಬೈಲ್ ಆಪ್ ಮೂಲಕ ದಂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ