ಲೆನೋವೋ ಕೆ-4 ನೋಟ್ ಕೇವಲ 10,999 ರೂ.ಗಳಲ್ಲಿ ಲಭ್ಯ

ಮಂಗಳವಾರ, 28 ಜೂನ್ 2016 (13:55 IST)
ಚೀನಾ ಮೂಲದ ಹ್ಯಾಂಡ್‌ಸೆಟ್ ತಯಾರಕರಾಗಿರುವ ಲೆನೋವೋ, ಭಾರತದ ಮಾರುಕಟ್ಟೆಯಲ್ಲಿ ಕೆ-4 ನೋಟ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ಬೆಲೆ ಕಡಿತಗೊಳಿಸುವುದಾಗಿ ಘೋಷಿಸಿದೆ.
ಭಾರದ ಮಾರುಕಟ್ಟೆಯಲ್ಲಿ ಒಂದು ಸಾವಿರ ರೂಪಾಯಿ ಬೆಲೆ ಕಡಿತಗೊಂಡಿರುವ ಕೆ-4 ನೋಟ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಗ್ರಾಹಕರಿಗೆ 10,999 ರೂಪಾಯಿಗಳಲ್ಲಿ ಲಭ್ಯವಾಗಲಿದೆ. ಈ ಕೂಡುಗೆ ಇಂದು ಮಾತ್ರ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. 
 
ಜನವರಿ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕೆ-4 ನೋಟ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಗ್ರಾಹಕರಿಗೆ 11,999 ರೂಪಾಯಿ ಬೆಲೆಯಲ್ಲಿ ಲಭ್ಯವಿದ್ದವು.
 
ಕೆ-4 ನೋಟ್ ಆವೃತ್ತಿ ಸ್ಮಾರ್ಟ್‌ಪೋನ್‌ಗಳ ವೈಶಿಷ್ಟ್ಯ
 
 
* ಫಿಂಗರ್‌ಪ್ರಿಂಟ್ ಸೆನ್ಸಾರ್
 
* ಆಕ್ಟಾ ಕೋರ್ ಪ್ರೊಸೆಸರ್
 
* 3 ಜಿಬಿ ರ್ಯಾಮ್ 
 
* ವರ್ಚುವಲ್ ರಿಯಾಲಿಟಿ ಬೆಂಬಲದೊಂದಿಗೆ 5.5 ಇಂಚ್ ಡಿಸ್‌ಪ್ಲೇ
 
* 5.5 ಇಂಚ್ ಫುಲ್ ಎಚ್‌ಡಿ (1080x1920p) ಡಿಸ್‌ಪ್ಲೇ
 
* 3 ಪ್ರೊಟೆಕ್ಷನ್ ಗೊರಿಲ್ಲಾ ಗ್ಲಾಸ್
 
* 16 ಜಿಬಿ ಆಂತರಿಕ ಸ್ಟೋರೇಜ್ ( 128 ಜಿಬಿ ವಿಸ್ತರಣೆಯ ಸಾಮರ್ಥ್ಯ)
 
* 64-ಬಿಟ್ ಆಕ್ಟಾ ಕೋರ್ ಮೀಡಿಯಾ ಟೆಕ್ 6753 ಚಿಪ್ಸೆಟ್
 
* 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ
 
* 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ
 
* 3,300 ಎಮ್‌ಎಎಚ್ ಸಾಮರ್ಥ್ಯದ ಬ್ಯಾಟರಿ

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ