ನಾಳೆ ಮುಂಜಾನೆ 11.59 ಗಂಟೆಗೆ ಅಮೆಜಾನ್ ಆನ್‌ಲೈನ್ ಮಾರುಕಟ್ಟೆಯಲ್ಲಿ ವೈಬ್ ಕೆ-5 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ಫ್ಲ್ಯಾಶ್ ಸೇಲ್ ಆರಂಭವಾಗಲಿದ್ದು, ಈ ಆವೃತ್ತಿಯ ಪೋನ್‌ಗಳು ಗ್ರಾಹಕರಿಗೆ 6,999 ರೂಪಾಯಿಗಳಲ್ಲಿ ಲಭ್ಯವಾಗಲಿದೆ.
ಈ ಹೊಸ ವೈಶಿಷ್ಟ್ಯದ ಸ್ಮಾರ್ಟ್‌ಪೋನ್‌ಗಳು ಅವಳಿ ಡಾಲ್ಬಿ ಅಟ್ಮೋಸ್ ವೈಶಿಷ್ಟ್ಯದ ಸ್ಪೀಕರ್‌ಗಳನ್ನು ಒಳಗೊಂಡಿದ್ದು, ಇದು ಬಳಕೆದಾರರಿಗೆ ವೀಡಿಯೊ ವೀಕ್ಷಿಸುವಾಗ ಮತ್ತು ಆಡಿಯೋ ಕೇಳುವಾಗ ಸ್ವಯಂಚಾಲಿತವಾಗಿ ಶಬ್ದ ಮತ್ತು ಧ್ವನಿ ವಿರೂಪವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.