ಎಲ್‌ಜಿ ಆಂಡ್ರಾಯ್ಡ್ 7 ಓಎಸ್ ಸ್ಮಾರ್ಟ್‌ಫೋನ್ ಬಿಡುಗಡೆ

ಬುಧವಾರ, 18 ಜನವರಿ 2017 (10:28 IST)
ಪ್ರಮುಖ ಎಲೆಕ್ಟ್ರಾನಿಕ್ ತಯಾರಿ ಕಂಪೆನಿ ಎಲ್‌ಜಿ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಎಲ್‌ಜಿ ಎಕ್ಸ್ 300 ಹೆಸರಿನ ಈ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ. 
 
4ಜಿ ಎಲ್‍ಟಿಇ ಸೌಲಭ್ಯವುಳ್ಳ ಫೋನ್ ಇದಾಗಿದ್ದು ಆಂಡ್ರಾಯ್ಡ್‌ನ ಹೊಸ ಆಪರೇಟಿಂಗ್ ಸಿಸ್ಟಂ ನೌಗಟ್‌ನ್ನು ಒಳಗೊಂಡಿದೆ. ಸದ್ಯಕ್ಕೆ ಕೊರಿಯಾ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಫೋನ್ ಶೀಘ್ರದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ.
 
ಎಲ್‌ಜಿ ಎಕ್ಸ್ 300 ವಿಶೇಷಗಳು:
* 5 ಇಂಚಿನ ಸ್ಪರ್ಶ ಸಂವೇದಿ ಪರದೆ
* 2ಜಿಬಿ ರ‍್ಯಾಮ್
* 16 ಜಿಬಿ ಇಂಟರ್‌ನಲ್ ಮೆಮೊರಿ
* 13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 5 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ
* 2500 ಎಂಎಎಚ್ ಬ್ಯಾಟರಿ ಸಾಮರ್ಥ್ಯ
* ಫಿಂಗರ್ ಪ್ರಿಂಟರ್ ಸ್ಕ್ಯಾನರ್ ಸೌಲಭ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ