ನವದೆಹಲಿ: ಕಳೆದ ವರ್ಷ ಕಳಪೆ ಗುಣಮಟ್ಟದ ಹಿನ್ನಲೆಯಲ್ಲಿ ನಿಷೇಧಕ್ಕೊಳಗಾಗಿದ್ದ ಮ್ಯಾಗಿ ನ್ಯೂಡಲ್ಸ್ ಇದೀಗ ಮತ್ತೆ ತೊಂದರೆ ಸಿಲುಕಿದೆ.
ಉತ್ತರ ಪ್ರದೇಶದಲ್ಲಿ ಮ್ಯಾಗೀ ನ್ಯೂಡಲ್ಸ್ ಪ್ರಯೋಗಾಲಯದ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ. ಕಳಪೆ ಗುಣಮಟ್ಟ ಹಿನ್ನಲೆಯಲ್ಲಿ ನೆಸ್ಲೆ ಇಂಡಿಯಾ ಕಂಪನಿ ಮೇಲೆ ಸ್ಥಳೀಯ ಜಿಲ್ಲಾಡಳಿತ 45 ಲಕ್ಷ ರೂ. ದಂಡ ವಿಧಿಸಿದೆ. ಅದರಂತೆ ಸಂಸ್ಥೆ ಇದೀಗ ಮೂವರು ವಿತರಕರು ಮತ್ತು ಇಬ್ಬರು ಮಾರಾಟಗಾರರಿಗೆ ದಂಡದ ಹಣ ಪಾವತಿಸಬೇಕಾಗಿದೆ.
ಹಿಂದೊಮ್ಮೆ ಇದೇ ರೀತಿ ಕಳಪೆ ಗುಣಮಟ್ಟ ಹಿನ್ನಲೆಯಲ್ಲಿ ಮ್ಯಾಗೀ ನ್ಯೂಡಲ್ ದೇಶಾದ್ಯಂತ ನಿಷೇಧಕ್ಕೊಳಗಾಗಿತ್ತು. ಕೊನೆಗೆ ಗುಣಮಟ್ಟ ಸಾಬೀತುಪಡಿಸಿದ ಮೇಲೆ ಮ್ಯಾಗೀ ನ್ಯೂಡಲ್ಸ್ ನ್ನು ಮಾರಾಟ ಮಾಡಲು ಅನುವು ಮಾಡಿಕೊಡಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ