ಸುಳ್ಳೇ ಸುಳ್ಳು ಜಾಹೀರಾತು ನೀಡಿದ್ರೆ ಹುಷಾರ್ ಅಂದ್ರು ಪ್ರಧಾನಿ ಮೋದಿ!

ಶುಕ್ರವಾರ, 27 ಅಕ್ಟೋಬರ್ 2017 (09:14 IST)
ನವದೆಹಲಿ: ಇನ್ನು ಮುಂದೆ ಸುಳ್ಳು ಮಾಹಿತಿ ನೀಡಿರುವ ಜಾಹೀರಾತು ನೀಡಿದರೆ ತಕ್ಕ ಬೆಲೆ ತೆರಬೇಕಾಗಹುದು. ಹಾಗಂತ  ಸ್ವತಃ ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.

 
ತಪ್ಪು ದಾರಿಗೆಳೆಯುವ ಜಾಹೀರಾತು ನೀಡುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಹೊಸ ನೀತಿ ಜಾರಿಗೆ ತರಲು ಪ್ರಧಾನಿ ಮೋದಿ ಚಿಂತನೆ ನಡೆಸಿದ್ದಾರೆ. ಕಡಿಮೆ ವೆಚ್ಚದಲ್ಲಿ, ತ್ವರಿತವಾಗಿ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವ ಕ್ರಮವೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ.

ಇದಕ್ಕಾಗಿ ಶಾಸನಾತ್ಮಕ ಅಧಿಕಾರ ಹೊಂದಿರುವ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲಾಗುತ್ತದೆ. 1986 ರ ಗ್ರಾಹಕ ರಕ್ಷಣ ಕಾನೂನಿನ ಬದಲಾಗಿ ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ