ದೇಶೀಯ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ವಾಹನ ಮಾರಾಟದಲ್ಲಿ ಇಳಿಕೆಯಾಗಿದೆ. ಮುಖ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಒಟ್ಟು ಮಾರಾಟದಲ್ಲಿ ಶೇ.1ರಷ್ಟು ಕಡಿಮೆಯಾಗಿದ್ದು 1,17,908 ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 1,19,149 ಕಾರುಗಳನ್ನು ಮಾರಾಟ ಮಾಡಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಇನ್ನು ದೇಶೀಯವಾಗಿ 2015 ಡಿಸೆಂಬರ್‌ನಲ್ಲಿ 1,11,333 ವಾಹನಗಳನ್ನು ಮಾರಾಟ ಮಾಡಲಾಗಿ ಈ ಬಾರಿ ಶೇ.4.4 ಅಂದರೆ 1,06,414 ಕಾರುಗಳಿಗೆ ಸೀಮಿತವಾಗಿದೆ. ಚಿಕ್ಕ ವಾಹನಗಳ ವಿಭಾಗದಲ್ಲಿ ಆಲ್ಟೋ, ವ್ಯಾಗನ್ ಆರ್ ಮಾರಾಟ ಶೇ.15.3ರಷ್ಟು ಇಳಿಕೆಯಾಗಿದೆ.
ಕಾಂಪ್ಯಾಕ್ಟ್ ವಿಭಾಗದಲ್ಲಿ ಸ್ವಿಫ್ಟ್, ಎಸ್ಟಿಲೋ, ರಿಡ್ಜ್, ಡಿಸೈರ್, ಬೊಲೆನೊ ಮಾರಾಟದಲ್ಲಿ ಶೇ.8.6ರಷ್ಟು ಇಳಿಕೆ ದಾಖಲಾಗಿದೆ. ಇನ್ನು ರಫ್ತು ವಿಚಾರಕ್ಕೆ ಬಂದರೆ ಶೇ.47.1ರಷ್ಟು ಹೆಚ್ಚಾಗಿರುವುದು ಗಮನಾರ್ಹ. ಕಳೆದ ವರ್ಷ 7,816 ಕಾರುಗಳನ್ನು ಮಾತ್ರ ರಫ್ತು ಮಾಡಲಾಗಿತ್ತು. ಈ ಬಾರಿ 11,494 ಕಾರುಗಳು ರಫ್ತಾಗಿವೆ.