ಮಾರುಕಟ್ಟೆಗೆ ದಾಂಗುಡಿ ಇಟ್ಟ ಮೈಕ್ರೋಮ್ಯಾಕ್ಸ್ ಎಸಿಗಳು

ಶುಕ್ರವಾರ, 3 ಮಾರ್ಚ್ 2017 (15:46 IST)
ಪ್ರಮುಖ ಗೃಹೋಪಕರಣಗಳ ಕಂಪೆನಿಯಾಗಿ ಬೆಳವಣಿಗೆ ಹೊಂದುತ್ತಿರುವ ಮೊಬೈಲ್ ತಯಾರಿ ಕಂಪೆನಿ ಮೈಕ್ರೋಮ್ಯಾಕ್ಸ್ ಮಾರುಕಟ್ಟೆಗೆ  ಹೊಸ ಶ್ರೇಣಿಯ ಹವಾನಿಯಂತ್ರಣ (ಎಸಿ) ಉಪಕರಣಗಳನ್ನು ಬಿಡುಗಡೆ ಮಾಡಿದೆ. 
 
ಕಳೆದ ವರ್ಷ ಜೂನ್‍ನಲ್ಲಿ ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಎಸಿಗಳನ್ನು ಬಿಡುಗಡೆ ಮಾಡಿದ್ದ ಮೈಕ್ರೋಮ್ಯಾಕ್ಸ್ ಇತ್ತೀಚೆಗೆ ಪೂರ್ಣ ಶ್ರೇಣಿಯ ಎಸಿಗಳನ್ನು ಬಿಡುಗಡೆ ಮಾಡಿದೆ. 7 ಸ್ಪ್ಲಿಟ್, ಒಂದು ವಿಂಡೋ ಎಸಿ ಬಿಡುಗಡೆ ಮಾಡುತ್ತಿರುವುದಾಗಿ ಮೈಕ್ರೋಮ್ಯಾಕ್ಸ್ ಉಪಾಧ್ಯಕ್ಷ (ಕಸ್ಟಮರ್ ಎಲೆಕ್ಟ್ರಾನಿಕ್ಸ್) ರೋಹನ್ ಅಗರ್ವಾಲ್ ತಿಳಿಸಿದ್ದಾರೆ.
 
ಮುಂಬರುವ ವರ್ಷ ಇನ್‌ವರ್ಟರ್ ಎಸಿ‌ಗಳನ್ನು ಸಹ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದಿದ್ದಾರೆ. ಎಸಿಗಳನ್ನು ಉತ್ಪಾದಿಸುತ್ತಿರುವ ಉತ್ತರಾಖಂಡದ ರುದ್ರಾಪುರ್ ಘಟಕದಲ್ಲಿ ಕಂಪೆನಿ ಸುಮಾರು ರೂ.200 ಕೋಟಿ ಬಂಡವಾಳ ಹೂಡಿದೆ. ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡಿದ ಎಸಿ ಶ್ರೇಣಿಗಳ ಬೆಲೆ ರೂ.21,000ದಿಂದ ರೂ.35,000ದರವೆಗೂ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ