ರೂ.67 ಲಕ್ಷ ಕೋಟಿ ಕಡೆಗೆ ಮೈಕ್ರೋಸಾಫ್ಟ್

ಬುಧವಾರ, 28 ಡಿಸೆಂಬರ್ 2016 (13:10 IST)
ಲಿಂಕ್ಡ್‌ಇನ್ ಖರೀದಿ ಮೈಕ್ರೋಸಾಫ್ಟ್ ಕಂಪನಿಗೆ ಕೂಡಿಬಂದಿದೆ ಅನ್ನಿಸುತ್ತದೆ. ಈ ಡೀಲ್ ಮೂಲಕ ಮೈಕ್ರೋಸಾಫ್ಟ್ ಬೆಲೆ ಮೊಟ್ಟ ಮೊದಲ ಬಾರಿಗೆ 1 ಟ್ರಿಲಿಯನ್ ಡಾಲರ್ (ರೂ.67 ಲಕ್ಷ ಕೋಟಿ) ಮುಟ್ಟಲಿದೆ ಎಂದು ಜೀಕ್‌ವೈರ್ ಸಂಸ್ಥೆ ತಿಳಿಸಿದೆ. 
 
ಈ ಕುರಿತು ಸೋಮವಾರ ವಿವರಗಳನ್ನು ಬಿಡುಗಡೆ ಮಾಡಿದೆ. ಟೆಕ್ ಕ್ಷೇತ್ರದಲ್ಲಿ ಆಪಲ್, ಅಮೆಜಾನ್ ಸಂಸ್ಥೆಗಳಿಗಿಂತಲೂ ಮುಂಚೆ ಮೈಕ್ರೋಸಾಫ್ಟ್ ಈ ಗಮ್ಯವನ್ನು ತಲುಪಲಿದೆ ಎಂದು ಹೇಳಿದೆ. ಲಿಂಕ್ಡ್‌ಇನ್ ಮೂಲಕ ಮೈಕ್ರೋಸಾಫ್ಟ್ ಸಾಮಾಜಿಕ ಮಾಧ್ಯಮದಲ್ಲಿ ಅಧಿಪತ್ಯ ಸಾಧಿಸುತ್ತಿದೆ ಎಂಂದಿದೆ ಸಮೀಕ್ಷೆ.
 
ಇತ್ತೀಚೆಗೆ ಅಮೆರಿಕಾ ಸೆಕ್ಯುರಿಟಿ ಅಂಡ್ ಎಕ್ಸ್‌ಚೇಂಜ್ ಕಮೀಷನ್ ನಿಧಿ ಸಂಗ್ರಹ ನಿಯಮಗಳಲ್ಲಿ ಬದಲಾವಣೆ ತರುತ್ತಿರುವುದು ಲಿಂಕ್ಡ್‌ಇನ್‌ಗೆ ವರವಾಗಿ ಪರಿಣಮಿಸಲಿದೆ ಎನ್ನಲಾಗಿದೆ. ಒಟ್ನಲ್ಲಿ ಮೈಕ್ರೋಸಾಫ್ಟ್ ಕಂಪನಿ ತನ್ನ ಮಾರುಕಟ್ಟೆ ಕ್ಶೇತ್ರವನ್ನು ಉಳಿಸಿಕೊಂಡಿರುವುದು ಇದರಿಂದ ಗೊತ್ತಾಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ