ಪೆಟ್ರೋಲ್ ಬಂಕ್‌ಗಳಲ್ಲಿ ಮೊಬಿಕ್ವಿಕ್ ವಿಶೇಷ ಆಫರ್

ಬುಧವಾರ, 11 ಜನವರಿ 2017 (11:40 IST)
ಮೊಬೈಲ್ ವ್ಯಾಲೆಟ್ ಮೂಲಕ ಪೆಟ್ರೋಲ್ ಬಂಕ್‌ಗಳು, ಅಡುಗೆ ಅನಿಲಕ್ಕೆ ಕೊಡಬೇಕಾಗಿರುವ ಸರ್‌ಚಾರ್ಜ್ ತೆಗೆದುಕೊಳ್ಳುವುದಿಲ್ಲ ಎಂದು ದೇಶೀಯ ಮೊಬೈಲ್ ವ್ಯಾಲೆಟ್ ಮೊಬಿಕ್ವಿಕ್ ಪ್ರಕಟಿಸಿದೆ. ಪೆಟ್ರೋಲ್ ಬಂಕ್‍ಗಳು, ಎಲ್‍ಪಿಜಿ ಪಾವತಿಯನ್ನು ಮೊಬಿಕ್ವಿಕ್ ಮೂಲಕ ಮಾಡಬಹುದು ಎಂದಿದೆ ಕಂಪನಿ.
 
ಇದಕ್ಕೆ ಯಾವುದೇ ರೀತಿಯ ಸರ್‌ಚಾರ್ಜ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಡಿಜಿಟಲ್ ಪಾವತಿಯನ್ನು ಪ್ರೋತ್ಸಾಹಿಸಲು ಈ ಕೊಡುಗೆ ನೀಡುತ್ತಿದ್ದೇವೆ ಎಂದು ಮೊಬಿಕ್ವಿಕ್ ಸಹ ವ್ಯವಸ್ಥಾಪಕಿ ಉಪಾಸನಾ ಥಾಕೂ ತಿಳಿಸಿದ್ದಾರೆ.
 
ದೇಶದ 20ಕ್ಕೂ ಹೆಚ್ಚು ನಗರಗಳಲ್ಲಿ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ಮೊಬಿಕ್ವಿಕ್ ಮೂಲಕ ಪಾವತಿಸು ಸೌಲಭ್ಯ ಇದೆ. ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಅನೇಕ ನಗರಗಳಲ್ಲಿ ಇಂಡಿಯನ್ ಆಲಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪ್ರೆಟ್ರೋಲಿಯಂ ಬಂಕ್‌ಗಳಲ್ಲಿ ಈ ಸೌಲಭ್ಯ ಕಲ್ಪಿಸಿದ್ದೇವೆ. ಇದರ ಜೊತೆಗೆ ಇಂಡಿಯನ್, ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್‍ಗೂ ಮೊಬಿಕ್ವಿಕ್ ಮೂಲಕ ಪಾವತಿ ಮಾಡಬಹುದಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ