ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ

ಶುಕ್ರವಾರ, 7 ಸೆಪ್ಟಂಬರ್ 2018 (06:37 IST)
ನವದೆಹಲಿ : ಕೆಲವರಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನೋಡಿದ ಎಲ್ಲಾ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಅಭ್ಯಾಸವಿರುತ್ತದೆ. ಅಂತವರು ಇನ್ನುಮುಂದೆ ಜಾಗೃತರಾಗಿರಿ.


ಯಾಕೆಂದರೆ ಅದರಲ್ಲಿ ಸಿಗುವ ಕೆಲವೊಂದು ಅಪ್ಲಿಕೇಶನ್ ಗಳು ನಿಮ್ಮ ಮಾಹಿತಿಗಳನ್ನು ಕನ್ನ ಹಾಕಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಲಭ್ಯವಿರುವ ಕೆಲ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಂಡರೆ ಫೇಸ್ ಬುಕ್ ನಲ್ಲಿರುವ ನಿಮ್ಮ ಮಾಹಿತಿಗಳು ಸೋರಿಕೆಯಾಗಬಹುದೆಂದು ಅವರು ತಿಳಿಸಿದ್ದಾರೆ.


ಈ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಂಡ ನಂತರ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ದಾಖಲಿಸಿದ ವೇಳೆ ಈ ಮಾಹಿತಿಗಳು ಸೋರಿಕೆಯಾಗುತ್ತವೆ ಎನ್ನಲಾಗಿದ್ದು, ಇದು ಫೇಸ್ ಬುಕ್ ನ ನಿಯಂತ್ರಣದಲ್ಲಿರದ ಕಾರಣ  ಇವರುಗಳು ಫೇಸ್ ಬುಕ್ ಖಾತೆದಾರನ ಅಕ್ಟಿವಿಟಿಯನ್ನು ಗಮನಿಸುತ್ತಿರುತ್ತಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಇಂತಹ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರ ವಹಿಸಿ ಎಂದು ತ ಜ್ಞರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ