ಕೇಂದ್ರ ಸರ್ಕಾರದಿಂದ ಹೊಸ ಯೋಜನೆ; ಇನ್ನುಮುಂದೆ ಸಿಲಿಂಡರ್ ಗೆ ಪೂರ್ಣ ಹಣ ಪಾವತಿ ಮಾಡಬೇಕಾಗಿಲ್ಲ

ಗುರುವಾರ, 29 ನವೆಂಬರ್ 2018 (14:20 IST)
ನವದೆಹಲಿ : ಸಿಲಿಂಡರ್ ಬೆಲೆ 1000 ಆದ ಹಿನ್ನಲೆಯಲ್ಲಿ ಬಡ, ಮಧ್ಯಮ ವರ್ಗದ ಜನರಿಗೆ ಸಮಸ್ಯೆಯಾಗುತ್ತಿರುವುದನ್ನು ಅರಿತ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ.


ಹೌದು. ಕೇಂದ್ರ ಸರ್ಕಾರ ಎಲ್.ಪಿ.ಜಿ ಸಿಲಿಂಡರ್ ಮೇಲೆ ಸಬ್ಸಿಡಿ ನೀಡುತ್ತಿದೆ. ಆ ಮೂಲಕ ಗ್ರಾಹಕರು ಪಾವತಿ ಮಾಡಿದ ಹಣದಲ್ಲಿ ಸ್ವಲ್ಪ ಹಣ ಬ್ಯಾಂಕ್ ನ ಫಲಾನುಭವಿ ಖಾತೆಗೆ ವರ್ಗಾವಣೆ ಮಾಡುತ್ತದೆ. ಆದರೆ ಗ್ರಾಹಕರು ಮೊದಲು ಸಿಲಿಂಡರ್ ನ ಪೂರ್ಣ ಹಣವನ್ನು ಪಾವತಿ ಮಾಡಬೇಕು. ಇದು ಕೆಲವು ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ.


ಈ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರ ಯೋಜನೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. ಹೊಸ ನಿಯಮದ ಪ್ರಕಾರ ಗ್ರಾಹಕರ ಸಬ್ಸಿಡಿ ಹಣ ನೇರವಾಗಿ ಪೆಟ್ರೋಲಿಯಂ ಕಂಪನಿಗಳ ಖಾತೆ ಸೇರಲಿದೆ. ಇದಕ್ಕಾಗಿ ಸರ್ಕಾರ ಹೊಸ ಸಿಸ್ಟಂ ಜಾರಿಗೆ ಬರ್ತಿದೆ. ಅದರ ಪ್ರಕಾರ ನೀವು ಗ್ಯಾಸ್ ಬುಕ್ ಮಾಡ್ತಿದ್ದಂತೆ ನಿಮ್ಮ ಮೊಬೈಲ್ ಗೆ ಕೋಡ್ ಬರಲಿದೆ.


ಮನೆಗೆ ಸಿಲಿಂಡರ್ ನೀಡಲು ಬಂದ ವ್ಯಕ್ತಿಗೆ ಈ ಕೋಡ್ ನೀಡಬೇಕು. ಆತ ಸಿಸ್ಟಂನಲ್ಲಿ ಈ ಕೋಡನ್ನು ನಮೂದಿಸುತ್ತಾನೆ. ಆಗ ನಿಮ್ಮ ಸಬ್ಸಿಡಿ ಹಣ ನೇರವಾಗಿ ಪೆಟ್ರೋಲಿಯಂ ಕಂಪನಿಗಳ ಬ್ಯಾಂಕ್ ಖಾತೆಗೆ ಹೋಗಲಿದೆ. ಆಗ ಗ್ರಾಹಕರು ಕೇವಲ ಸಬ್ಸಿಡಿ ಬೆಲೆಯನ್ನು ಮಾತ್ರ ಪಾವತಿಸಿದ್ರೆ ಸಾಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ